ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಿಸಿ ವಾಹನ ಸವಾರರಿಗೆ ಶಾಕ್ ಕೊಟ್ಟಿದೆ. ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಜನತೆ ಜೇಬಿಗೆ ಕತ್ತರಿ ಪ್ರಯೋಗ ಮಾಡಿದ್ದು, ಲೀಟರ್ ಪೆಟ್ರೋಲ್‌ಗೆ 3 ರೂ. ಲೀಟರ್ ಡೆಸೇಲ್‌ಗೆ 3.5 ರೂ ಹೆಚ್ಚಿಗೆ ಜೊತೆಗೆ ಪೆಟ್ರೋಲ್,ಡಿಸೇಲ್ ಮೇಲಿನ ರಿಟೇಲ್ ಸೇಲ್ಸ್ ಟ್ಯಾಕ್ಸ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್ 25.92% ಇದ್ದದ್ದು, ಈಗ 29.84%ಗೆ ಏರಿಕೆ (3.9%ಹೆಚ್ಚಳ) ಡಿಸೇಲ್ ಈ ಹಿಂದೆ 14.43% ಇದ್ದದ್ದು,ಈಗ 18.44%ಗೆ ಏರಿಕೆ ಕಂಡಿದೆ (4.1%ರಷ್ಟು ಏರಿಕೆ) ಇದರಿಂದ ಇನ್ನು ಮುಂದೆ ಪೆಟ್ರೋಲ್ ದರ ಲೀಟರ್‌ಗೆ 103 ರೂ.ಗೆ ಹಾಗೂ ಡೀಸೆಲ್ 91 ರೂ. 50 ಪೈಸೆ ಏರಿಕೆಯಾಗಿದೆ. ಈ ಹಿಂದೆಯೇ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟ ತೆರಿಗೆ ದರವನ್ನು ಏರಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಡೆಹಿಡಿಯಲಾಗಿತ್ತು. ಶನಿವಾರ ಇಂದಿನಿಂದಲೇ ಪರಿಸ್ಕೃತ ದರ ಜಾರಿಯಾಗಿದೆ.
