ಬೆಂಗಳೂರು: ರಾಜ್ಯದಲ್ಲಿ 19 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಡೆಂಘೀಗೆ ರಾಜ್ಯದಲ್ಲಿ 10 ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಸಕ್ರಿಯವಾಗಿ 2406 ಡೆಂಘೀ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 337 ಡೆಂಘೀ ಪ್ರಕರಣ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 10 ಮಕ್ಕಳಲ್ಲಿ ಡೆಂಘೀ ಧೃಡವಾಗಿದೆ. ಇಲ್ಲಿಯವರೆಗೆ 0-1 ವರ್ಷದ 360 ಮಕ್ಕಳಲ್ಲಿ ಡೆಂಘೀ ದೃಢವಾಗಿದೆ. 1ರಿಂದ 18 ವರ್ಷ ವಯಸ್ಸಿನ 133 ಮಕ್ಕಳಲ್ಲಿ ಡೆಂಘೀ ದೃಢವಾಗಿದೆ. ಇಲ್ಲಿಯವರೆಗೆ 1-18 ವರ್ಷದ 6863 ಜನರಲ್ಲಿ ಡೆಂಘೀ ದೃಢ ಆಗಿದ್ರೆ, 18 ವರ್ಷ ಮೇಲ್ಪಟ್ಟ 194 ಜನರಲ್ಲಿ ಡೆಂಘೀ ದೃಢ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಕಿ 123 ಡೆಂಘೀ ಪ್ರಕರಣ ಪತ್ತೆ ಯಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 8800 ಡೆಂಘೀ ಪ್ರಕರಣ ಪತ್ತೆಯಾಗಿದೆ.