ಶ್ರಮ ಶಕ್ತಿ ಯೋಜನೆ: 50 ಸಾವಿರ ಸಾಲ, 25 ಸಾವಿರ ಫ್ರೀ..! ಅರ್ಜಿ ಸಲ್ಲಿಸುವ ಹೇಗೆ..? ಇಲ್ಲಿದೆ ಮಾಹಿತಿ

ಶ್ರಮ ಶಕ್ತಿ ಯೋಜನೆಯು ಕರ್ನಾಟಕದಲ್ಲಿರುವಂತಹ ಎಲ್ಲಾ ಅಲ್ಪಸಂಖ್ಯಾತರಿಗೆ ಕೂಡ ಸಹ ಹಣವನ್ನು ನೀಡುತ್ತದೆ. ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ. ನೀವು ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿಯನ್ನು ಮಾಡಬೇಕಾಗುತ್ತದೆ. ಈ ಶ್ರಮ ಶಕ್ತಿ ಯೋಜನೆಯನ್ನ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯು ಜಾರಿಗೊಳಿಸಿದೆ.

ಇದು ಕೂಡ ಸರ್ಕಾರಿ ಯೋಜನೆಯಾಗಿದೆ. ಆದ್ದರಿಂದ ನೀವು ಈ ಯೋಜನೆಯ ಮೂಲಕ ₹50000/- ದವರೆಗೆ ಹಣವನ್ನು ನೀವು ಸುಲಭವಾಗಿ ಪಡೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಏನು.?

Advertisement

  • ಅರ್ಜಿದಾರರ ಆಧಾರ್ ಕಾರ್ಡ್ (Aadhaar card)
  • ಅರ್ಜಿದಾರರ ವಯೋಮಿತಿಯ ಪ್ರಮಾಣ ಪತ್ರ
  • ಅರ್ಜಿದಾರರ KMDC ಯಿಂದ ಪಡೆದುಕೊಂಡಿರುವಂತಹ ಅರ್ಜಿ ನಮೂನೆ
  • ಅರ್ಜಿದಾರರ ಖಾಯಂ ವಿಳಾಸದ ಪ್ರಮಾಣ ಪತ್ರ
  • ಅರ್ಜಿದಾರರ ಬ್ಯಾಂಕ್ ಖಾತೆ ವಿವರ
  • ಅರ್ಜಿದಾರರ ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ ಅಥವಾ ಈಗಾಗಲೇ ಪ್ರಾರಂಭ ಮಾಡಿರುವಂತಹ ಸ್ವಂತ ಉದ್ಯೋಗದ ಮಾಹಿತಿ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳಿರಬೇಕು.?

  • ಅಲ್ಪಸಂಖ್ಯಾತ ಸಮುದಾಯದವಾಗಿರಬೇಕು.
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • 18 ರಿಂದ 55 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.
  • ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆಯಿರಬೇಕು.
  • ನಗರವಾಸಿಯ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು.

ಈ ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ?

ಈ ಶ್ರಮ ಶಕ್ತಿ ಯೋಜನೆ (Shrama Shakthi Scheme) ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಲು KMDC ಕಚೇರಿಗಳಿಗೆ ಭೇಟಿಯನ್ನು ನೀಡಿ ಅರ್ಜಿಯನ್ನು ಕೂಡ ನೇರವಾಗಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಈ ಮೇಲೆ ತಿಳಿಸಿದಂತಹ ದಾಖಲೆಗಳನ್ನು ನೀವು ತೆಗೆದುಕೊಂಡು ಹೋಗಿ KMDC ಕಚೇರಿಯಲ್ಲಿ ನೀಡುವ ಅರ್ಜಿ ನಮೂನೆಯನ್ನು ಭರ್ತಿಯನ್ನು ಮಾಡಿ ಸಲ್ಲಿಕೆ ಮಾಡಬಹುದಾಗಿದೆ. ನೀವು KMDC ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕೂಡ ನೀವು ಆನ್ ಲೈನ್ ಮೂಲಕ ಕೂಡ ಅರ್ಜಿಯನ್ನ ಸಲ್ಲಿಸಬಹುದು ತುಂಬ ಸುಲಭವಾಗಿ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement