ದೆಹಲಿ : ರಾಜ್ಯದ ಜನ ನಿಮ್ಮನ್ನು ಗೆಲ್ಲಿಸಿದ್ದು ಏಕೆ? ಪ್ರಧಾನಿ ಬಳಿ ಹೋಗಿ ಬರೀ ತಲೆ ಅಲ್ಲಾಡಿಸೋದಕ್ಕಾ? ಜನ ಬರದಿಂದ ತೊಂದರೆಗೊಳಗಾಗಿದ್ದರೂ, ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವನ್ನು ಕೊಡದಿದ್ದರೂ ಕೂಡ ಕೇಳಬೇಕಾದ ಬಿಜೆಪಿಯ ಒಬ್ಬ ಸದಸ್ಯರೂ ಪ್ರಧಾನಿ ಬಳಿ ಕೇಳದೇ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ.
ಹೀಗಂತ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಗುಡುಗಿದರು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸಂಸದರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.