ಬೆಂಗಳೂರು: ಕಾಂಗ್ರೆಸ್‌ಗೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಹೇಳಿಕೆ ಕೇಳಿ ಶಾಕ್ ಆಗಿದೆ ಹೌದು ಕಳೆದ ಶನಿವಾರ ಅಷ್ಟೇ ಕಾಂಗ್ರೆಸ್ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ ವಿಧಾನಸೌಧದಿಂದ ಕಾಲ್ನಡಿಗೆಯಲ್ಲಿ ರಾಜಭವನದವರೆಗೂ ತೆರಳಿ ರಾಜ್ಯಪಾಲರ ಭೇಟಿ ಮಾಡಿ ವಿಪಕ್ಷಗಳ ಮೇಲೆ ಇರುವ ಆರೋಪಗಳ ಬಗ್ಗೆಯೂ ಪ್ರಾಸಿಕ್ಯೂಷ್‌ಗೆ ಅನುಮತಿ ಕೊಡಿ ಎಂದು ಮನವಿ ಮಾಡಿ ಬಂದಿದ್ದರು.
ಪ್ರಮುಖವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ,ಮುರುಗೇಶ್ ನಿರಾಣಿ ಮತ್ತು ಶಶಿಕಲಾ ಜೊಲ್ಲೆ ಸೇರಿದಂತೆ ರಾಜ್ಯಪಾಲರ ಮುಂದೆ ಇರುವ ಪ್ರಕರಣಗಳ ಪ್ರಾಸಿಕ್ಯೂಷನ್ ಗೆ ಅನುಮತಿ ಮನವಿ ಸಲ್ಲಿಸಿದರು. ಮನವಿ ಏನೋ ಸಲ್ಲಿಸಿದರು ಆದ್ರೆ ಈ ವೇಳೆ ಮನವಿ ಪಡೆದ ಬಳಿಕ ರಾಜ್ಯಪಾಲರ ಹೇಳಿಕೆಗೆ ಕಾಂಗ್ರೆಸ್ ತಬ್ಬಿಬ್ಬಾಗಿದೆ, ರಾಜಭವನದಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಯಾವುದೇ ಅರ್ಜಿ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.
ರಾಜ್ಯಪಾಲರು ಹೇಳಿಕೆಯಿಂದ ಕಾಂಗ್ರೆಸ್ ನಾಯಕರ ಕಸಿವಿಸಿಗೆ ಕಾರಣವಾಗಿದೆ ಇದ್ರ ಬಗ್ಗೆ ಮಾತನಾಡಿರುವ ಡಿಕೆಶಿ ಫೈಲ್ ಏನಾಯ್ತು ಅನ್ನೋದು ನಮಗೂ ಗೊತ್ತಿಲ್ಲ ಇದು ನಮಗೂ ಅದೇ ಯಕ್ಷಪ್ರಶ್ನೆಯಾಗಿದೆ ಎಂದಿದ್ದಾರೆ. ರಾಜ್ಯಪಾಲರು ವಿಪಕ್ಷಗಳ ಯಾವುದೇ ಅರ್ಜಿ ಇಲ್ಲ ಎಂದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಮುಂದಾಗಿರುವ ಡಿಕೆಶಿ ಮಾಜಿ ಸಚಿವರುಗಳ ಮೇಲಿನ ದೂರುರಾಜಭವನಕ್ಕೆ ತಲುಪಿದ ನಂತರ ಏನಾಯ್ತು ಅನ್ನೋ ಡಿಟೈಲ್ ರಿಪೋರ್ಟ್ ಕೊಡಿ ಎಂದು ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಸೂಚಿಸಿದ್ದಾರೆ ಎನ್ನಲಾಗಿದೆ.
.ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ