ಚಿತ್ರದುರ್ಗ: ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶ ಅಶಕ್ತ ಸಮುದಾಯಗಳಿಗೆ ಶಕ್ತಿ ತುಂಬುವ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಬೇಕು.
ಇದಕ್ಕೆ ಅಹಿಂದ ವರ್ಗದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಮುದ್ರೆ ಒತ್ತಬೇಕು ಎಂದು ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಸಂಚಾಲಕ ಆರ್.ಶೇಷಣ್ಣಕುಮಾರ್ ಮನವಿ ಮಾಡಿದ್ದಾರೆ.
ಪಿ.ಕೋದಂಡರಾಮಯ್ಯ, ಮುರುಘರಾಜೇಂದ್ರ ಒಡೆಯರ್, ఎం.జయణ్ణ, ಬಂಜಗೆರೆ ಜಯಪ್ರಕಾಶ್ ಚಳ್ಳಕೆರೆ ಬಸವರಾಜ, ಈ. ಮಹೇಶ ಬಾಬು ಸೇರಿದಂತೆ, ಜಿಲ್ಲೆಯ ರೈತ, ಕಾರ್ಮಿಕ ಸೇರಿ ಹತ್ತಾರು ಸಂಘಟನೆಗಳು ಹೋರಾಟ ನಡೆಸಿದ್ದರ ಫಲ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡಿದೆ.
ಆದರೆ, ಕಾಮಗಾರಿ ವಿಳಂಬ ಆಗುತ್ತಿದ್ದು, ವೇಗ ನೀಡುವ ಕೆಲಸ, ಕಾಂತರಾಜ್ ಆಯೋಗದ ವರದಿ ಸ್ವೀಕರಿಸುವುದಯು ಹಾಗೂ ವಿವಿಧ ಜಾತಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಮಾವೇಶದಲ್ಲಿ ಘೋಷಣೆ ಮಾಡಬೇಕು. ಹೀಗೆ ಅನೇಕ ಬೇಡಿಕೆಗಳ ಈಡೇರಿಕೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸುವ ಮೂಲಕ ಸಮಾವೇಶ ಇತಿಹಾಸದಲ್ಲಿ ದಾಖಲಾಗಬೇಕು ಎಂದಿದ್ದಾರೆ.