ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆ ರಾಜ್ಯಾದ್ಯಂತ 9 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಬೆಸ್ಕಾಂ, ಆರೋಗ್ಯ ಇಲಾಖೆ, ಅರಣ್ಯ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನಿವಾಸ, ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಗದಗ, ಕಲಬುರಗಿ ರಾಯಚೂರಿನ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಅಧಿಕಾರಿಗಳ ವಿವರ
ಲೋಕೇಶ್ ಬಾಬು – ಸೂಪರಿಂಟೆಂಡಿಂಗ್ ಎಂಜಿನಿಯರ್, ಬೆಂಗಳೂರು, ಪೂರ್ವ ವೃತ್ತ, ಬೆಸ್ಕಾಂ, ಸುರೇಶ್ ಬಾಬು – ರೆವಿನ್ಯೂ ಇನ್ಸ್ಪೆಕ್ಟರ್, ವಸಂತಪುರ, ಉತ್ತರಹಳ್ಳಿ ಉಪ ವಿಭಾಗ ಕೃಷ್ಣಪ್ಪ – ಟ್ಯಾಕ್ಸ್ ಇನ್ಸ್ಪೆಕ್ಟರ್, ಬಿಬಿಎಂಪಿ ಯಲಹಂಕ ವಲಯ ಎಂ.ಸಿ.ಸುನೀಲ್ ಕುಮಾರ್ – ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂರು ಗ್ರಾಮಾಂತರ ನಂಜುಂಡಯ್ಯ – ಡಿಎಸ್ಪಿ – ಸಶಸ್ತ್ರ, ಪೊಲೀಸ್ ತರಬೇತಿ ಶಾಲೆ, ಚನ್ನಪಟ್ಟಣ ಲಕ್ಷ್ಮಣ್ – ದ್ವಿತೀಯ ದರ್ಜೆ ಸಹಾಯಕ, ಇಇ ಆಫೀಸ್, ಗದಗ ರಾಮಪ್ಪ – ಸೂಪರಿಂಟೆಂಡೆಂಟ್ ಇಂಜಿನಿಯರ್ / ಅಸಿಸ್ಟೆಂಟ್ ಕಮಿಷನರ್ (ಡೆವಲಪ್ಮೆಂಟ್), ಮಹಾನಗರ ಪಾಲಿಕೆ ಕಲಬುರಗಿ ರಮೇಶ್ – ಅಬಕಾರಿ ಇನ್ಸ್ಪೆಕ್ಟರ್, ಅಬಕಾರಿ ಇಲಾಖೆ ಕೊಪ್ಪಳ ಸುರೇಶ್ – ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಿರಿಯೂರು ಸಬ್ ಡಿವಿಷನ್, ಚಿತ್ರದುರ್ಗ