ರಾಜ್ಯ ಬಜೆಟ್‌ 2023: ಅಲ್ಪಸಂಖ್ಯಾತರ ಶಿಕ್ಷಣ, ಸ್ವಾವಲಂಬನೆಗೆ ಹಲವು ಕಾರ್ಯಕ್ರಮಗಳ ಘೋಷಣೆ

ಬೆಂಗಳೂರು: 2023 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಹಲವು ಕ್ಷೇತ್ರಗಳಿಗೆ ಕೊಡುಗೆಗಳನ್ನು ನೀಡಿದ್ದು, ಅಲ್ಪ ಸಂಖ್ಯಾತರಿಗೆ ಬಂಪರ್‍ ಗಿಫ್ಟ್ ನೀಡಲಾಗಿದೆ. ಈಗಿನ ೬೨ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗ ಉನ್ನತೀಕರಣ. ೬-೧೨ ತರಗತಿಯವರೆಗೆ ಉನ್ನತಿಕರಣ. ಮೌಲಾನಾ ಆಜಾದ್ ಶಾಲೆಗಳ ಸ್ವತಃ ಕಟ್ಟಡ ನಿರ್ಮಾಣಕ್ಕೆ ಕ್ರಮ.

ಮಹಿಳೆಯರಿಗೆ ಸಿಹಿ ಸುದ್ದಿ: ಉದ್ಯೋಗಿನಿ ಯೋಜನೆ ಅಡಿ ‘3 ಲಕ್ಷ’ ಸಾಲ ಸೌಲಭ್ಯ-ನೀವೂ ಅರ್ಜಿ ಸಲ್ಲಿಸಿ

Advertisement

ಅಲ್ಪಸಂಖ್ಯಾತ ವಿಧ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಗೆ ಸಾಲ ನೀಡಲು ನಿರ್ಧಾರ.

ವ್ಯಾಸಂಗ ಮಾಡಲು ೨% ಬಡ್ಡಿ ದರದಲ್ಲಿ ಸಾಲ. ಅಲ್ಪಸಂಖ್ಯಾತ ಯುವಕರಿಗೆ ಕೌಶಲ್ಯ ತರಬೇತಿ ರಾಮನಗರ,ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೌಶಲ್ಯಭಿವೃದ್ದಿ ತರಬೇತಿ ಗೆ ನಾಲ್ಕು ಕೋಟಿ ಮೀಸಲು . ಬೆಂಗಳೂರಿನ ಹಜ್ ಭವನದಲ್ಲಿ IAS/KAS ತರಬೇತಿ ಪ್ರಾರಂಭ. ವಸತಿ ಸಹಿತ ತರಬೇತಿ ನೀಡಲು ನಿರ್ಧಾರ. ಅಲ್ಪಸಂಖ್ಯಾತ ೨೫೦ ರ ವಿವಿ ರ್ಯಾಕಿಂಗ್ ಪಡೆದ ವಿಧ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು‌ ಶೂನ್ಯ ಬಡ್ಡಿಯಲ್ಲಿ ಸಾಲ.

ಅರ್ಧಕ್ಕೆ ನಿಂತ ಶಾದಿಮಹಲ್ ಮರು ನಿರ್ಮಾಣಕ್ಕೆ ಚಾಲನೆ . 54 ಕೋಟಿ ರೂಪಾಯಿ ಇದಕ್ಕಾಗಿ ಮೀಸಲು ಹಿಂದೂಯೆತರ ಧಾರ್ಮಿಕ ಸಂಸ್ಥೆಗಳ ತಸ್ತಿಕ ಹಣ ಹೆಚ್ಚಳ, 48 ಸಾವಿರ ಕೋಟಿಯಿಂದ 60 ಸಾವಿರ ಕೋಟಿಗೆ ಹೆಚ್ಚಳ. ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ 360 ಕೋಟಿ ಮೀಸಲು. ಸ್ವಾವಲಂಬಿ ಸಾರಥಿ ಯೋಜನೆ ಅಲ್ಪ ಸಂಖ್ಯಾತರಿಗೆ ಅನ್ವಯ . ನಾಲ್ಕು ಚಕ್ರಗಳ ವಾಹನ ಖರೀದಿಗೆ 3 ಲಕ್ಷ ಸಹಾಯಧನ.

ಕ್ರಿಶ್ಚಿಯನ್ ನಿಗಮ ಮಂಡಳಿ ಸ್ಥಾಪನೆಗೆ 100 ಕೋಟಿ ಮೀಸಲು. ಜೈನರ ಪುಣ್ಯಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ‌ಮೀಸಲು. ರಾಜ್ಯದಲ್ಲಿ 49,000 ವಕ್ಪ ಆಸ್ತಿಗಳ ಸಂರಕ್ಷಣೆಗೆ ಕ್ರಮ. ವಕ್ಪ ಆಸ್ತಿ ಸಂರಕ್ಷಣೆಗೆ 50 ಕೋಟಿ ಹಣ ಮೀಸಲು . ಹಲಸೂರು ಗುರುದ್ವಾರ ಅಭಿವೃದ್ಧಿಗೆ 25 ಕೋಟಿ ಮೀಸಲು ಇಡಲಾಗಿದೆ ಎಮದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿ ತಿಳಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement