ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳ ನಡೆಯಲಿದೆ.
ಇದಕ್ಕೆ ಪೂರ್ವಭಾವಿಯಾಗಿ ಕರೆಪೂಜೆಯನ್ನು (ಗುದ್ದಲಿಪೂಜೆ) ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ನೆರವೇರಿಸಿದ್ದಾರೆ. ಕರೆಪೂಜೆಯಲ್ಲಿ ಮಾಜಿ ಸಿಎಂ ಸದಾನಂದಗೌಡ, ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಶಾಸಕರಾದ ಎನ್ ಎ ಹ್ಯಾರಿಸ್, ಅಶೋಕ್ ಕುಮಾರ್ ರೈ, ಕಂಬಳ ಸಮಿತಿಯ ಗುರುಕಿರಣ್, ಪ್ರಕಾಶ್ ಶೆಟ್ಟಿ, ಗುಣರಂಜನ್ ಶೆಟ್ಟಿ, ಉಮೇಶ್ ಶೆಟ್ಟಿ, ಕಾಂತರಾಜ್ ಮತ್ತಿತರರು ಪಾಲ್ಗೊಂಡರು.
ಕಂಬಳ ಎಲ್ಲರ ಪಾಲಿನ ಅಚ್ಚುಮೆಚ್ಚಿನ ಕ್ರೀಡೆಯಾಗಿದ್ದು, ಪಕ್ಷಭೇದವಿಲ್ಲದೆ ನಡೆಯಲಿದೆ. ರಾಜ್ಯ ಸರಕಾರದಿಂದ ನೆರವು ಸಿಗಲಿದೆ. ಅರಮನೆ ಮೈದಾನದಲ್ಲಿ ಅದ್ದೂರಿ ಕಂಬಳಕ್ಕೆ ಎಲ್ಲ ರೀತಿಯ ಮೂಲಸೌಕರ್ಯ ಮಾಡಬೇಕಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆಯಾಗಬೇಕಿದೆ. ಫುಡ್ ಫೆಸ್ಟ್‌ವಲ್ ನಡೆಯಲಿದ್ದು, ಸುಮಾರು 125 ಸ್ಟಾಲ್‌ಗಳ ವ್ಯವಸ್ಥೆಯಾಗಬೇಕಿದೆ. ತುಳುನಾಡಿನ ಶ್ರೀಮಂತ ಸಂಸ್ಕೃತಿ ದೇಶಕ್ಕೆ ಪರಿಚಯಿಸಯವ ಕೆಲಸ ರಾಜ್ಯ ರಾಜಧಾನಿಯಲ್ಲಿ ನಡೆಯಬೇಕಾದ ಕಾರಣ ಸಾಕಷ್ಟು ಖರ್ಚು ತಗುಲಲಿದೆ ಎಂದು ಕಂಬಳ ಆಯೋಜನಾ ಸಮಿತಿಯ ಅಧ್ಯಕ್ಷರಾದ ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ