ರಾಜ್ಯ ಸರ್ಕಾರದಿಂದ ಬೋರ್ವೆಲ್ ಕೊರಿಸಲು 4 ಲಕ್ಷ ಸಬ್ಸಿಡಿ. ಈಗಲೇ ಅರ್ಜಿ ಸಲ್ಲಿಸಿ.! ಆಗಸ್ಟ್ 31 ಕೊನೆ ದಿನಾಂಕ

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 4 ಲಕ್ಷ ಸಬ್ಸಿಡಿಯನ್ನು ನೀಡುವ ಮೂಲಕ ರಾಜ್ಯದ ರೈತರಿಗೆ ಬೋರ್ವೆಲ್ ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ. ಈ ಯೋಜನೆ ಅಡಿಯಲ್ಲಿ ರೈತನ ಬರಗಾಲದ ಸಂಕಷ್ಟವನ್ನು ತಪ್ಪಿಸಲು ಸರ್ಕಾರವು ಈ ಯೋಜನೆಯನ್ನು ಜಾರಿಗೆಗೊಳಿಸಿದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು.?

  1. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನ ವಯೋಮಿತಿಯು 18 ವರ್ಷ  ಮೇಲ್ಪಟ್ಟಿರಬೇಕು.
  2.  ಅಷ್ಟೇ ಅಲ್ಲದೆ  ಅರ್ಜಿದಾರನು ಒಂದೇ ಸ್ಥಳದಲ್ಲಿ ಎರಡು ಎಕ್ಕರೆ ಅಥವಾ 5 ಎಕರೆ ಜಮೀನನ್ನು ಹೊಂದಿರಬೇಕು.
  3.  ಜಮೀನನ್ನು ಹೊಂದಿರುವ ಸ್ಥಳದಲ್ಲಿ ಯಾವುದೇ ರೀತಿಯ ನೀರಾವರಿ ವ್ಯವಸ್ಥೆಯು ಆ ಜಮೀನಿಗೆ ಇರಬಾರದು.
  4. ಅಲ್ಲಿನ ನಿಗಮಕ್ಕೆ ಸಂಬಂಧಪಟ್ಟವರ ವರ್ಗಕ್ಕೆ ಮಾತ್ರ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ .
  5. ಅಷ್ಟೇ ಅಲ್ಲದೆ ಕೊಡಗು, ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಎಕರೆ ಜಮೀನನ್ನು ಹೊಂದಿರಬೇಕು.
  6. ಅಷ್ಟೇ ಅಲ್ಲದೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇರಬೇಕು

ಗಂಗಾ ಕಲ್ಯಾಣ ಯೋಜನೆಗೆ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?

  • ಅರ್ಜಿದಾರನ ಆಧಾರ್ ಕಾರ್ಡ್
  •  ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  •  ಬ್ಯಾಂಕ್ ಪಾಸ್ ಬುಕ್
  •   ಸ್ವಂತ ಜಮೀನಿನ ಪಹಣಿ
  •  ಅರ್ಜಿದಾರನ ಭಾವಚಿತ್ರ
  • BPL ರೇಷನ್ ಕಾರ್ಡ್
  •  ಮೊಬೈಲ್ ಸಂಖ್ಯೆ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ ದಿನಾಂಕವಾಗಿದೆ. ಆದ್ದರಿಂದ ಯಾರೆಲ್ಲ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ. ಅವರು ಬೇಗನೆ ಅರ್ಜಿ ಸಲ್ಲಿಸಿ. 

Advertisement

ಯೋಜನೆಗೆ ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು.?

ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್  ಮತ್ತು ಸೈಬರ್ ಸೆಂಟರ್ ಗಳಲ್ಲಿ ಭೇಟಿಯನ್ನು ನೀಡಿ. ಆನ್ಲೈನ್ ಮೂಲಕ ನೀವು ಅರ್ಜಿ  ಸಲ್ಲಿಸುವ ಮೂಲಕ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

” ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.”

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement