ಬೆಂಗಳೂರು : ರಾಜ್ಯ ಸರ್ಕಾರ ಹಸಿರು ಪಟಾಕಿ ಕಡ್ಡಾಯಗೊಳಿಸಿ ಹಲವು ವರ್ಷಗಳಾಗಿದೆ. ಪ್ರತಿ ದೀಪಾವಳಿ ವೇಳೆ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂದು ನಿರ್ಬಂಧ ಹೇರಿದೆ. ಆದರೆ ನಗರದಲ್ಲಿ ಮಾರಾಟವಾಗುವ ಒಟ್ಟು ಪಾಟಾಕಿಗಳಲ್ಲಿ ಶೇ.5 ರಿಂದ 10ರಷ್ಟೇ ಹಸಿರು ಪಟಾಕಿ.
ಕಳೆದ ವರ್ಷ ನಗರದಲ್ಲಿ 400 ಕೋಟಿಯಷ್ಟು ಪಟಾಕಿ ಮಾರಾಟ ವಾಗಿದ್ದು, ಅದರಲ್ಲಿ ಕೇವಲ 40 ಕೋಟಿ ಮಾತ್ರ ಹಸಿರು ಪಟಾಕಿ. ಇನ್ನೇನು ದೀಪಾವಳಿ ಹಬ್ಬಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಈ ಬಾರಿ ಸುಮಾರು 500 ಕೋಟಿ ಪಟಾಕಿ ವ್ಯಾಪಾರ ನಡೆಯುವ ನಿರೀಕ್ಷೆ ಇದೆ.
ಆದ್ರೆ ಹಸಿರು ಪಟಾಕಿ ಗುರುತಿಸೋದು ಹೇಗೆ, ಇಲ್ಲಿದೆ ಮಾಹಿತಿ. ಪಟಾಕಿ ಪೊಟ್ಟಣದ ಮೇಲೆ ‘ಸಿಎಸ್‌ಐಆರ್- ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ಲೋಗೋ ಇರುತ್ತದೆ.
ಗ್ರಾಹಕರು ಹಸಿರು ಪಟಾಕಿ ಖರೀದಿಸಲು ಅನುಕೂಲ ವಾಗುವಂತೆ ಸಿಎಸ್‌ಐಆರ್ ವೆಬ್‌ಸೈಟ್‌ನಲ್ಲಿ ಹಸಿರು ಪಟಾಕಿ ಉತ್ಪಾದನೆ, ಮಾರಾಟ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಂತಹ ಕಂಪನಿಗಳ ಪಟಾಕಿ ಮಾತ್ರ ಗ್ರಾಹಕರು ಖರೀದಿಸಬಹುದು.
ಈ ಪಟಾಕಿ ಗಳು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ.