ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,500 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಸರ್ಕಾರವು ಪೊಲೀಸ್ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಪೊಲೀಸ್ ಇಲಾಖೆಯ ಕೆಎಸ್ಆರ್ಪಿ (KSRP), ʻಆರ್ಪಿಸಿ (RPC) ವಿಭಾಗದಲ್ಲಿ ಖಾಲಿ ಇರುವ 1,500 ಹುದ್ದೆಗಳ ನೇರ ನೇಮಕಾತಿ ನಡೆಯಲಿದೆ.
ಕೆಎಸ್ಆರ್ಪಿ, ಆರ್ಪಿಸಿ (ಪುರುಷ, ಮಹಿಳೆ) 1500 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹುದ್ದೆಗಳ ಪೈಕಿ ಕ್ರೀಡಾ ಪಟುಗಳಿಗೆ ಶೇ. 2, ಕಲ್ಯಾಣ ಕರ್ನಾಟಕೇತರ ಒಟ್ಟು 30 ಹುದ್ದೆಗಳು ಮೀಸಲಿಡಲಾಗಿದೆ, ಸಿಆರ್ಪಿಸಿ (CRPC) ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿಯಂತೆ 12 ಹುದ್ದೆಗಳು ಮೀಸಲಿಡಲಾಗಿದೆ.