ಊಟದ ಬಳಿಕ ವಾಕಿಂಗ್ ಮಾಡೋದ್ರಿಂದ ಹೊಟ್ಟೆ ನೋವು ಬರುತ್ತೆ ಎಂದು ಅನೇಕರು ಹೇಳ್ತಾರೆ. ಹೀಗಾಗಿ ಏನಾದರೂ ತಿಂದ ಬಳಿಕ ವಾಕಿಂಗ್ ಮಾಡೋದು ಅಪಾಯಕಾರಿ ಅಂತಾ ಕೂಡ ಹೇಳಲಾಗುತ್ತೆ.
ಈ ಹೊಟ್ಟೆ ನೋವು ಬರುವ ವಿಚಾರ ನಿಜವಾಗಿದ್ದರೂ ಸಹ ಇದೇನು ಜೀವಕ್ಕೆ ಅಪಾಯಕಾರಿ ಆಗುವಂತಹ ಅಂಶವೇನಲ್ಲ. ನಮ್ಮ ಜೀರ್ಣಾಂಗಗಳು ಹೃದಯದಿಂದ ಪಂಪ್ ಆದ ರಕ್ತದಿಂದ 20 ರಿಂದ 25 ಪ್ರತಿಶತವನ್ನ ಪಡೆದುಕೊಳ್ತಾವೆ, ಊಟವಾದ ಕೂಡಲೇ ವಾಕಿಂಗ್ ಮಾಡೋದ್ರಿಂದ ದೇಹದಲ್ಲಿ ರಕ್ತ ಪಂಪ್ ಆಗುವ ಪ್ರಕ್ರಿಯೆ ಹೆಚ್ಚಾಗುತ್ತೆ. ಹೀಗಾಗಿ ನಿಮಗೆ ಹೊಟ್ಟೆ ನೋವು ಬಂದ ಅನುಭವ ಉಂಟಾಗುತ್ತೆ. ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯೊಲ್ಲ ಕಾರಣ ಏನು…? ಆದರೆ ಊಟದ ಬಳಿಕ ನೀವು ಒಂದು 15ರಿಂದ 20 ನಿಮಿಷ ವಾಕಿಂಗ್ ಮಾಡೋದ್ರಿಂದ ಯಾವುದೇ ಅಪಾಯ ಉಂಟಾಗೋದಿಲ್ಲ. ನೀವು ವಾಕಿಂಗ್ ಮಾಡೋದ್ರ ಮೂಲಕ ತೂಕ ಇಳಿಸುವ ಪ್ಲಾನ್ ಹೊಂದಿದ್ದರೆ ರಾತ್ರಿ ಊಟದ ಬಳಿಕ 10 ನಿಮಿಷವಾದರೂ ವಾಕ್ ಮಾಡಿ.
ಕ್ರಮೇಣವಾಗಿ ಈ ಸಮಯವನ್ನ ಹೆಚ್ಚು ಮಾಡ್ತಾ ಹೋಗಿ. ಕ್ರಮೇಣ ಈ ಸಮಯ 30 ನಿಮಿಷಗಳವರೆಗೆ ಏರಿಕೆ ಮಾಡಿ. ಈ ಅಭ್ಯಾಸವನ್ನ ಹೊರತು ಪಡಿಸಿ ಇಡೀ ದಿನದಲ್ಲಿ ನೀವೆಷ್ಟು ವ್ಯಾಯಾಮ, ದೇಹ ದಂಡನೆ ಮಾಡ್ತೀರಿ ಅನ್ನೋದನ್ನ ಆಧರಿಸಿ ನಿಮ್ಮ ದೇಹದ ತೂಕ ಇಳಿಕೆಯಾಗುತ್ತಾ ಹೋಗುತ್ತೆ.