ಕೆಲ ಜನರಿಗೆ ಆತಂಕ, ಚಿಂತೆಯಿಂದ ರಾತ್ರಿ ಎದುರಾಗಿ ನಿದ್ರೆ (sleep) ಬರುವುದಿಲ್ಲ. ತಡರಾತ್ರಿಯವರೆಗೂ ಎಚ್ಚರವಾಗಿಯೇ ಇರುತ್ತಾರೆ. ಆದರೆ ಬಿಸಿನೀರು (hot water) ಕುಡಿಯುವುದರಿಂದ ಈ ಸಮಸ್ಯೆಯನ್ನು ಇಲ್ಲವಾಗಿಸಬಹುದು.
ರಾತ್ರಿ ಮಲಗುವ ಮುನ್ನ ಬಿಸಿ ನೀರು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಬಿಸಿ ನೀರು ನೋಯುತ್ತಿರುವ ಗಂಟಲು ಸಮಸ್ಯೆಯನಯ ಕಡಿಮೆ ಮಾಡುತ್ತದೆ.
ದೇಹದಿಂದ ವಿಷವನ್ನು (poison) ತೆಗೆದು ಹಾಕಬಹುದು.
ರಾತ್ರಿ ಮಲಗುವುದಕ್ಕಿಂತ ಮುಂಚೆ ಬಿಸಿ ನೀರು ಕುಡಿದರೆ ಹಲ್ಲಿನಲ್ಲಿ ಅಂಟಿಕೊಂಡಿರುವ ಸೂಕ್ಷ್ಮಾಣುಗಳನ್ನು (Germs) ದೂರವಾಗಿ ಹಲ್ಲುಗಳು ಸ್ವಚ್ಛವಾಗುತ್ತವೆ. ನಮ್ಮ ದೇಹದಲ್ಲಿರುವ ಬಿಸಿ ನೀರು ನರಮಂಡಲವನ್ನೂ ಸಡಿಲಗೊಳಿಸುತ್ತದೆ (relaxes the nervous system). ಕೆಲಸದ ಒತ್ತಡದಿಂದ ಬಳಲುತ್ತಿರುವವರು ಮಲಗುವುದಕ್ಕಿಂತ ಮುಂಚೆ ಬಿಸಿ ನೀರು ಕುಡಿದರೆ ಒತ್ತಡ (stress) ಕಡಿಮೆಯಾಗುತ್ತದೆ.
ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿದರೆ ನೋವು (pain) ಕಡಿಮೆಯಾಗುತ್ತದೆ. ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.