ಶಿವಮೊಗ್ಗ: ಬಿಜೆಪಿಯವರು ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಮನನ್ನು ವಿರೋಧಿಸುತ್ತಿಲ್ಲ. ರಾಮಮಂದಿರ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ರಾಜಕೀಯವನ್ನು ವಿರೋಧಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಲೋಕಾರ್ಪಣೆ ಆದ ಬಳಿಕ ಅಯೋಧ್ಯೆಗೆ ತೆರಳುತ್ತೇನೆ. ರಾಮಮಂದಿರ ಹೇಗೆ ನಿರ್ಮಾಣ ಮಾಡಿದ್ದಾರೆಂದು ನೋಡಿ ಬರುತ್ತೇನೆ ಎಂದು ಹೇಳಿದರು.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅಂದರೇ ಸುಳ್ಳು, ಸುಳ್ಳು ಅಂದರೇ ಕುಮಾರಸ್ವಾಮಿ. ಹೆಚ್ ಡಿ ಕುಮಾರಸ್ವಾಮಿ ಹೇಳುವುದೆಲ್ಲ ಸುಳ್ಳು. ಅವರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವಂತ ಅಗತ್ಯೆವಿಲ್ಲ. ಮೂರು ಜನ ಡಿಸಿಎಂ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಇನ್ನು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ. 22ರ ಬಳಿಕ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಸಹ ರಾಮಮಂದಿರಕ್ಕೆ ಹೋಗುತ್ತಾರೆ. ನಾವು ಬಿಜೆಪಿ ರಾಜಕಾರಣ ವಿರೋಧ. ಬದಲಾಗಿ ಶ್ರೀ ರಾಮನ ವಿರೋಧಿಗಳಲ್ಲ. ನಾವು ಶ್ರೀ ರಾಮನ ಭಕ್ತರು. ಆದರೆ ಬಿಜೆಪಿಯವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದು, ಅದಕ್ಕೆ ನಾವು ವಿರೋಧಿಸುತ್ತಿದ್ದೇವೆಯೇ ಹೊರತು ಶ್ರೀರಾಮನನ್ನು ವಿರೋಧ ಮಾಡುತ್ತಿಲ್ಲ ಎಂದರು.