ತುಮಕೂರು: ಬಿಜೆಪಿಯವರು ನನಗೆ ರಾವಣ ಎಂದು ಕರೆದಿದ್ದಾರೆ. ಇದರಿಂದ ಬೇಜಾರಿಲ್ಲ. ರಾವಣ ಎಂದು ಕರೆಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ,ರಾವಣನಂತಹ ದೈವ ಭಕ್ತ ಮತ್ತೊಬ್ಬಇರಲಿಲ್ಲ. ಬಿಜೆಪಿಯವರು ಡೋಂಗಿ ದೈವ ಭಕ್ತರು ಎಂದು ಕಿಡಿಕಾರಿದ್ದರೆ.
‘ಬಾಬ್ರಿ ಮಸೀದಿ ಗಲಾಟೆಯ ಸಮಯದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದೆ. ಒಂದು ಟೆಂಟ್ನಲ್ಲಿ ಎರಡು ಬೊಂಬೆ ತಂದಿಟ್ಟು ಶ್ರೀ ರಾಮ ಎಂದು ಹೇಳುತ್ತಿದ್ದರು. ಅದು ಟೂರಿಂಗ್ ಟಾಕಿಸ್ನ ಬೊಂಬೆಗಳಂತೆ ಕಂಡಿದ್ದವು .ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ರಾವಣ ಎಂದು ಕರೆದಿದ್ದಾರೆ.
ಬೊಂಬೆಯನ್ನು ದೇವರು ಎಂದು ಕರೆದರೆ ತಪ್ಪೇನಿದೆ? ಬೊಂಬೆಯಲ್ಲಿ ದೈವತ್ವ ಇಲ್ಲವೆ?ಹೊಲದಲ್ಲಿ ಸಗಣಿಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡುತ್ತೇವೆ.ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡುತ್ತಾರೆ. ಅದು ನಮ್ಮ ನಂಬಿಕೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ರಾವಣ ಶಿವನ ಭಕ್ತ. ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿದ್ದು. ಹಾಗಾಗಿ ನಾನು ಶ್ರೀ ರಾಮ ಹಾಗೂ ರಾವಣ ಇಬ್ಬರ ಪರ ಇದ್ದೇನೆ ಎಂದು ಹೇ ಳಿದರು.