ದಾವಣಗೆರೆ; ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ, ಕಾಳುಮೆಣಸು, ಕೋಕೋ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಪರಿಶಿಷ್ಟ ಜಾತಿಯ ಅರ್ಹ ರೈತರಿಗೆ ಪ್ರಾಥಮಿಕ ಸಂಸ್ಕರಣಾ ಘಟಕ ಸ್ಥಾಪಿಸಲು ಸಹಾಯಧನ ಹಾಗೂ ಎಲ್ಲಾ ವರ್ಗದ ರೈತರಿಗೆ ಹಸಿರು ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಒದಗಿಸಲಾಗುವುದು.
ರಾಷ್ಟೀಯ ಕೃಷಿ ವಿಕಾಸ ಇಲಾಖೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ಅರ್ಹ ತೋಟಗಾರಿಕೆ ಬೆಳೆ ಹೊಂದಿರುವ ರೈತರಿಗೆ 9000 ಸಿಎಂಟಿ ಸಾಮರ್ಥ್ಯದ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಕಸಬಾ 9686334350, ರೈತ ಸಂಪರ್ಕ ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಆನಗೋಡು 7019819101, ರೈತ ಸಂಪರ್ಕ ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಮಾಯಕೊಂಡ-6364642155. ರೈತ ಸಂಪರ್ಕ ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಮಾಯಕೊಂಡ-2 8722551293 ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಪಿ.ಬಿ.ರಸ್ತೆ ದಾವಣಗೆರೆ ಇಲ್ಲಿ ಸಂಪರ್ಕಿಸಬಹುದು.