ಬೇಕಾಗುವ ಸಾಮಗ್ರಿ:
ಚಿಕನ್ 1 ಕೆಜಿ, ಈರುಳ್ಳಿ 4, ಎಣ್ಣೆ, ಪುದೀನಾ ಸೊಪ್ಪು 1 ಕಪ್, ಹಸಿ ಮೆಣಸು 13, ಏಲಕ್ಕಿ 6, ಚಕ್ಕೆ 4 ಚಿಕ್ಕ ತುಂಡು, ಕಸೂರಿ ಮೇತಿ ಸ್ವಲ್ಪ, ಜೀರಿಗೆ ಪುಡಿ ಅರ್ಧ ಚಮಚ, ಕಾರದ ಪುಡಿ 2 ಚಮಚ, ಗರಂ ಮಸಾಲಾ 2 ಚಮಚ, ಅರಿಶಿಣ 1/2 ಚಮಚ, ಮೊಸರು 1 ಕಪ್, ಶುಂಠಿ – ಬೆಳ್ಳುಳ್ಳಿ ಪೇಸ್ಟ್ 2 ದೊಡ್ಡ ಚಮಚ, ಕೊತ್ತಂಬರಿ ಸೊಪ್ಪು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಮೊಸರು ಹಾಗೂ ಹಸಿ ಮೆಣಸನ್ನ ಹಾಕಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಈ ಮಿಶ್ರಣವನ್ನ ಚೆನ್ನಾಗಿ ತೊಳೆದುಕೊಂಡ ಚಿಕನ್ ಪೀಸ್ಗಳ ಜೊತೆ ಸೇರಿಸಿ ಮ್ಯಾರಿನೇಟ್ ಮಾಡಿಡಿ. ಇದಾದ ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಚಕ್ಕೆ, ಏಲಕ್ಕಿ, ಈರುಳ್ಳಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ನ್ನು ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೂ ಹುರಿಯಿರಿ . ಇದಕ್ಕೆ ಇವಾಗ ಮ್ಯಾರಿನೇಟ್ ಮಾಡಿಟ್ಟ ಚಿಕನ್ ಹಾಗೂ ಕಾರದಪುಡಿ, ಗರಂ ಮಾಸಾಲಾ ಅರಿಶಿಣ, ಕಸೂರಿ ಮೇತಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪನ್ನ ಹಾಕಿ ಚಿಕನ್ ಪೀಸ್ಗಳು ಬೇಯುವರೆಗೂ ಒಲೆಯ ಮೇಲಿಡಿ.