ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ – 3
- ಕಾರ್ನ್ ಫ್ಲೋರ್ – 2 ಚಮಚ
- ಕಡಲೇ ಹಿಟ್ಟು – 2 ಚಮಚ
- ಕಾಳು ಮೆಣಸಿನ ಪುಡಿ – ಅರ್ಧ ಚಮಚ
- ಜೀರಿಗೆ – ಅರ್ಧ ಚಮಚ
- ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ – 1
- ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಸ್ವಲ್ಪ
- ಉಪ್ಪು – ಅರ್ಧ ಚಮಚ
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಆಲೂಗಡ್ಡೆಯ ಸಿಪ್ಪೆ ತೆಗೆದು, ತುರಿದುಕೊಳ್ಳಿ. 5 ನಿಮಿಷಗಳ ಕಾಲ ತುರಿದ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಸಿಡಿ.
- ಬಳಿಕ ನೀರನ್ನು ಹಿಂಡಿ ಆಲೂಗಡ್ಡೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಇತಕ್ಕೆ ಕಾರ್ನ್ ಫ್ಲೋರ್ ಹಾಗೂ ಕಡಲೇ ಹಿಟ್ಟನ್ನು ಸೇರಿಸಿ. ಆಲೂಗಟ್ಟೆ ತೇವಾಂಶ ಇದ್ದರೆ ಮತ್ತಷ್ಟು ಹಿಟ್ಟನ್ನು ಸೇರಿಸಿಕೊಳ್ಳಿ.
- ಈಗ ಮಿಶ್ರಣಕ್ಕೆ ಕಾಳು ಮೆಣಸಿನ ಪುಡಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ತವಾವನ್ನು ಬಿಸಿ ಮಾಡಿ, ಅದಕ್ಕೆ ಚಮಚದ ಸಹಾಯದಿಂದ ದೋಸೆ ಆಕಾರದಲ್ಲಿ ಆಲೂಗಡ್ಡೆ ಮಿಶ್ರಣವನ್ನು ತೆಳ್ಳಗೆ ಹರಡಿ. ದೋಸೆಯ ಸುತ್ತಲೂ 1 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಬೇಯಿಸಿ.
- ದೋಸೆ ಗೋಲ್ಡನ್ ಬ್ರೌನ್ ಹಾಗೂ ಗರಿಗರಿಯಾಗುವತನಕ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಆಲೂಗಡ್ಡೆ ದೋಸೆ ಸವಿಯಲು ಸಿದ್ಧ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.