- ಅಲೂಗಡ್ಡೆ- 4
- ಮೊಟ್ಟೆ-3
- ಅಚ್ಚ ಖಾರದ ಪುಡಿ- 1 ಚಮಚ
- ದನಿಯಾ ಪುಡಿ- ಅರ್ಧ ಚಮಚ
- ಅರಿಶಿನದ ಪುಡಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಮ್ಯಾಗಿ ಮಸಾಲೆ ಪುಡಿ- ಅರ್ಧ ಚಮಚ
- ಕೊತ್ತಂಬರಿ ಸೊಪ್ಪು-ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
- ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಬ್ರೆಡ್ ಕ್ರಮ್ಸ್- 1 ಬಟ್ಟಲು
- ಮೊದಲಿಗೆ ಆಲೂಗಡ್ಡೆ ಹಾಗೂ ಮೊಟ್ಟೆಯನ್ನು ಬೇಸಿಸಿಕೊಂಡು, ಸಿಪ್ಪೆ ತೆಗೆದು, ಎರಡನ್ನೂ ತುರಿದುಕೊಳ್ಳಿ.
- ನಂತರ ಇದಕ್ಕೆ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಅರಿಶಿನದ ಪುಡಿ, ಉಪ್ಪು, ಮ್ಯಾಗಿ ಮಸಾಲೆ ಪುಡಿ ಹಾಗೂ ಕೊತ್ತಂಬರಿ ಸೊಪ್ಪು, ಈರುಳ್ಳಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ತಟ್ಟಿ, ಬ್ರೆಡ್ ಕ್ರಮ್ಸ್ ನಲ್ಲಿ ಎರಡೂ ಬದಿಯಲ್ಲಿ ಅದ್ದಿಕೊಳ್ಳಿ.
- ನಂತರ ಒಲೆಯ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಎರಡೂ ಬದಿಯಲ್ಲೂ ರೋಸ್ಟ್ ಮಾಡಿಕೊಂಡರೆ ರುಚಿಕರವಾದ ಎಗ್ ಪೊಟ್ಯಾಟೊ ಕಟ್ಲೆಟ್ ಸವಿಯಲು ಸಿದ್ಧ.