ಬೇಕಾಗುವ ಪದಾರ್ಥಗಳು…
- ಕರಿಬೇವು- 1 ಬಟ್ಟಲು
- ಈರುಳ್ಳಿ- 2
- ಬೆಳ್ಳುಳ್ಳಿ- 20 ಎಸಳು
- ಹಸಿಮೆಣಸಿನ ಕಾಯಿ – 2-3
- ಹುಣಸೆಹಣ್ಣು – ನೆಲ್ಲಿಕಾಯಿ ಗಾತ್ರದ್ದಷ್ಟು
- ಅರಿಶಿನ – 1 ಚಿಟಿಕೆ
- ಎಣ್ಣೆ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಮೊದಲಿಗೆ ಕರಿಬೇವಿನ ಎಲೆಯನ್ನು ಚೆನ್ನಾಗಿ ತೊಳೆದಿಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿ, ಮೆಣಸಿನ ಕಾಯಿ, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವು, ಅರಿಶಿನ, ಉಪ್ಪು, ಹುಣಸೆಹಣ್ಣು ಸೇರಿಸಿ 5 ನಿಮಿಷಗಳ ಕಾಲ ಹುರಿದು ಗ್ಯಾಸ್ ಆಫ್ ಮಾಡಿ.
- ಇದು ತಣ್ಣಗಾದ ಮೇಲೆ ಮಿಕ್ಸಿ ಜಾರ್’ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಬೇಕಿದ್ದರೆ ಸಾಸಿವೆ ಒಗ್ಗರಣೆ ಹಾಕಬಹುದು.