ಬೇಕಾಗುವ ಪದಾರ್ಥಗಳು
- ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗದ ತುರಿ – 2 ಬಟ್ಟಲು
- ತೆಂಗಿನ ತುರಿ- 1 ಬಟ್ಟಲು
- ರವೆ- ಅರ್ಧ ಬಟ್ಟಲು
- ಸಕ್ಕರೆ- ಎರಡು ಬಟ್ಟಲು
- ತುಪ್ಪ 2-3 ಚಮಚ
- ಮೊದಲು ಬಿಳಿ ಭಾಗದ ತುರಿಯನ್ನು ಬಾಣಲೆಗೆ ಹಾಕಿ ನೀರನ್ನು ಇಂಗಿಸಿ.
- ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ. ಪಾಕ ಬಂದು ಗಟ್ಟಿಯಾಗಬೇಕು
- ಮಧ್ಯೆ ಮಧ್ಯೆ ತುಪ್ಪ ಸೇರಿಸಿ. ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ರವೆಯನ್ನು ಚೆನ್ನಾಗಿ ಹುರಿದು ಮಿಶ್ರಣ ಮಾಡಿ.
- ತಳ ಬಿಡುವ ಹಂತಕ್ಕೆ ಬಂದಾಗ ಒಂದು ಚಮಚ ತುಪ್ಪ ಸೇರಿಸಿ. ಒಂದು ಪ್ಲೇಟಿಗೆ ಹಾಕಿ, ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಕಲ್ಲಂಗಡಿ ಹಣ್ಣಿನ ಬರ್ಫಿ ಸವಿಯಲು ಸಿದ್ಧ.