ಬೇಕಾಗುವ ಪದಾರ್ಥಗಳು…
- ಕೊತ್ತಂಬರಿ ಸೊಪ್ಪು- 1 ಸಣ್ಣ ಗೊಂಚಲು
- ಜೀರಿಗೆ – 1/2 ಚಮಚ
- ಹಸಿರು ಮೆಣಸಿನಕಾಯಿ- 1
- ತುರಿದ ತೆಂಗಿನಕಾಯಿ – 1/2 ಬಟ್ಟಲು
- ಮೊಸರು- 1 ಬಟ್ಟಲು
- ಕೆಂಪು ಮೆಣಸಿನಕಾಯಿ-1
- ಅಡುಗೆ ಎಣ್ಣೆ / ತುಪ್ಪ- 2 ಚಮಚ
- ಸಾಸಿವೆ- ಸ್ವಲ್ಪ
- ಕರಿಬೇವು-ಸ್ವಲ್ಪ
- ಇಂಗು-ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಕೊತ್ತಂಬರಿ ಸೊಪ್ಪನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ತೊಳೆಯಿರಿ. ನಂತರ ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
- ಬಾಣಲೆಯನ್ನು ಬಿಸಿ ಮಾಡಿ, ಎಣ್ಣೆ ಹಾಗೂ ಜೀರಿಗೆಯನ್ನು ಹಾಕಿ. ನಂತರ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿ, ತೆಂಗಿನ ತುರಿಯನ್ನು ಸೇರಿಸಿ. ಸಣ್ಣ ಉರಿಯಲ್ಲಿ 5 ಸೆಕೆಂಡ್ ಗಳ ಕಾಲ ಫ್ರೈ ಮಾಡಿ. ಬಳಿಕ ಇದನ್ನು ಮಿಕ್ಸಿ ಜಾರ್’ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನೀರು ಸೇರಿಸಬಹುದು.
- ನಂತರ ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ಮೊಸರು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಆಮೇಲೆ ಒಂದು ಒಗ್ಗರಣೆ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವು ಹಾಕಿ. ಈ ಒಗ್ಗರಣೆಯನ್ನು ತಂಬುಳ್ಳಿಗೆ ಹಾಕಿ ಮಿಕ್ಸ್ ಮಾಡಿಕರೆ ರುಚಿಕರವಾದ ʼಕೊತ್ತಂಬರಿʼ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ.