ಬೇಕಾಗುವ ಸಾಮಗ್ರಿಗಳು: ¼ ಕಪ್ ಹಸಿ ಬಟಾಣಿ, 4 – ಹಸಿಮೆಣಸು, ಈರುಳ್ಳಿ – 1, ಚಕ್ಕೆ – 1 ಪೀಸ್, ಸೋಂಪು – 1 ಟೀ ಸ್ಪೂನ್, ಏಲಕ್ಕಿ – 2, ಲವಂಗ – 5, ಪಲಾವ್ ಎಲೆ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಅಕ್ಕಿ – 1 ಲೋಟ, ತೆಂಗಿನಕಾಯಿ ಹಾಲು – 1 ಲೋಟ, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ – 2 ಚಮಚ, ಎಣ್ಣೆ – 2 ಚಮಚ, ಗೋಡಂಬಿ – 1 ಚಮಚ.
ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ½ ಗಂಟೆ ನೆನೆಸಿ ಇಡಿ. ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ. ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ಹಸಿಮೆಣಸು ಸೇರಿಸಿ ಬಳಿಕ ತೆಂಗಿನಕಾಯಿ ಹಾಲು, 1 ಲೋಟ ನೀರು ಹಾಕಿ ಕುದಿಸಿ. ಇದಕ್ಕೆ ಅಕ್ಕಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೇಲೆ ಒಂದು ಚಮಚ ತುಪ್ಪ ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ಒಂದು ಚಮಚ ತುಪ್ಪ ಹಾಕಿ ಗೋಡಂಬಿ ಕರಿದು ರೈಸ್ ಗೆ ಬೆರೆಸಿ ಸರ್ವ್ ಮಾಡಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ