ಬೇಕಾಗುವ ಪದಾರ್ಥಗಳು…
- ಗೋಧಿ ನುಚ್ಚು-1 ಬಟ್ಟಲು
- ಬೆಲ್ಲ ಅಥವಾ ಸಕ್ಕರೆ-1 ಬಟ್ಟಲು
- ಹಾಲು-1 ಬಟ್ಟಲು
- ಏಲಕ್ಕಿ ಪುಡಿ-ಅರ್ಧ ಚಮಚ
- ದ್ರಾಕ್ಷಿ ಮತ್ತು ಗೋಡಂಬಿ-ಅರ್ಧ ಬಟ್ಟಲು
- ತುಪ್ಪ-2 ಚಮಚ
- ಕೇಸರಿ ದಳ-2
- ಗೋಧಿ ನುಚ್ಚನ್ನು ಬೆಚ್ಚಗೆ ಹುರಿದು ಕುಕ್ಕರ್‌ನಲ್ಲಿ ಸ್ವಲ್ಪ ಜಾಸ್ತಿ ನೀರು ಹಾಕಿ ಮೆತ್ತಗೆ ಬೇಯಿಸಿ.
- ಬೆಲ್ಲವನ್ನು ನೀರು ಹಾಕಿ ಕರಗಿಸಿ ಸೋಸಿ. ಇದನ್ನು ಬೆಂದ ಗೋಧಿ ನುಚ್ಚಿಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಇದಕ್ಕೆ ಹಾಲು, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ, ಹಾಗೂ ಕೇಸರಿ ದಳ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5-10 ನಿಮಿಷ ಕುದಿಸಿದರೆ ರುಚಿಕರವಾದ ಗೋಧಿ ನುಚ್ಚಿನ ಪಾಯಸ ಸವಿಯಲು ಸಿದ್ಧ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.