ಬೇಕಾಗುವ ಪದಾರ್ಥಗಳು…
- ಎಣ್ಣೆ- 3 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಚಿಕನ್ – ಅರ್ಧ ಕೆಜಿ
- ಉಪ್ಪು-ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಸ್ವಲ್ಪ
- ಮೊಸರು- 1/4 ಬಟ್ಟಲು
- ಗೋಡಂಬಿ- 8
- ಈರುಳ್ಳಿ- ಎಣ್ಣೆಯಲ್ಲಿ ಫ್ರೈ ಮಾಡಿದ್ದು ಸ್ವಲ್ಪ
- ಹಸಿಮೆಣಸಿನ ಕಾಯಿ- 2
- ಕೊತ್ತಂಬರಿ ಸೊಪ್ಪು- ಒಂದು ಹಿಡಿಯಷ್ಟು
- ಪುದೀನಾ- ಒಂದು ಹಿಡಿಯಷ್ಟು
- ಕಾಳು ಮೆಣಸಿನ ಪುಡಿ- ಅರ್ಧ ಚಮಚ
- ಚಕ್ಕೆ-ಲವಂಗ ಪುಡಿ- ಸ್ವಲ್ಪ
- ದನಿಯಾ ಪುಡಿ- ಸ್ವಲ್ಪ
- ಗರಂ ಮಸಾಲಾ ಪುಡಿ- ಕಾಲು ಚಮಚ
ಮಾಡುವ ವಿಧಾನ…
- ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಮಾಡಿಕೊಳ್ಳಿ.
- ನಂತರ ಚಿಕನ್ ಪೀಸ್ ಗಳನ್ನು ಹಾಕಿ. ನಂತರ ರುಚಿಗೆತಕ್ಕಷ್ಟು ಉಪ್ಪು, ಅರಿಶಿಣದ ಪುಡಿಸ ಮೊಸರು ಹಾಕಿ 3 ನಿಮಿಷ ಬೇಯಿಸಿ.
- ಬಳಿಕ ಮಿಕ್ಸಿ ಜಾರ್ ಗೆ ಗೋಡಂಬಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯಿಸಿದ ಚಿಕನ್ ಗೆ ಹಾಕಿ. 2 ನಿಮಿಷ ಕುಡಿಯಲು ಬಿಡಿ.
- ನಂತರ ಕಾಳುಮೆಣಸಿನ ಪುಡಿ, ಚಕ್ಕೆ-ಲವಂಗ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಿ, ಮಸಾಲೆ ಗಟ್ಟಿಗಾದ ಬಳಿಕ ಒಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪನೊಂದಿಗ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಚಿಕನ್ ಸವಿಯಲು ಸಿದ್ಧ.