ಬೇಕಾಗುವ ಪದಾರ್ಥಗಳು…
- ಬೆಳ್ಳುಳ್ಳಿ – 15-20
- ಶುಂಠಿ – ಸ್ವಲ್ಪ
- ಹಸಿ ಮೆಣಸಿನಕಾಯಿ – 8-10
- ಹೆಚ್ಚಿದ ಈರುಳ್ಳಿ – ಅರ್ಧ ಬಟ್ಟಲು
- ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
- ಹೆಚ್ಚಿದ ಪುದೀನ – ಮುಕ್ಕಾಲು ಬಟ್ಟಲು
- ದಾಲ್ಚಿನ್ನಿ (ಚಕ್ಕೆ)– ಸ್ವಲ್ಪ
- ಲವಂಗ – 8
- ಕಾಳುಮೆಣಸು – 1 ಚಮಚ
- ದನಿಯಾ ಪುಡಿ – 2 ಚಮಚ
- ತುರಿದ ತೆಂಗಿನಕಾಯಿ – ಸ್ವಲ್ಪ
- ಚಿಕನ್ ತುಂಡುಗಳು – 3/4 ಕೆಜಿ
- ಹೆಚ್ಚಿದ ಈರುಳ್ಳಿ – 1 ಬಟ್ಟಲು
- ಹೆಚ್ಚಿದ ಟೊಮೆಟೊ – ಅರ್ಧ ಬಟ್ಟಲು
- ನಿಂಬೆ ಹಣ್ಣು – ಅರ್ಧ
- ಎಣ್ಣೆ – 3 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಮೊದಲಿಗೆ ಮಿಕ್ಸಿ ಜಾರ್’ಗೆ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ಚಕ್ಕೆ, ಲವಂಗ, ಕಾಳುಮೆಣಸು, ದನಿಯಾ ಪುಡಿ, ತುರಿದ ತೆಂಗಿನಕಾಯಿ ಹಾಕಿ, ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ.
- ನಂತರ ಒಲೆಯ ಮೇಲೆ ಒಂದು ಕಡಾಯಿ ಇಟ್ಟು ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
- ಈರುಳ್ಳಿ ಚಿನ್ನದ ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ.
- ಈಗ ಚಿಕನ್ ತುಂಡುಗಳನ್ನು ಹಾಕಿ, ಉಪ್ಪು ಸೇರಿಸಿ ಫ್ರೈ ಮಾಡಿ.
- ಮೊದಲೇ ರುಬ್ಬಿ ಇಟ್ಟುಕೊಂಡಿದ್ದ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಚಿಕನ್ ಚೆನ್ನಾಗಿ ಬೆಂದ ಬಳಿಕ ನಿಂಬೆ ರಸವನ್ನು ಹಾಕಿದರೆ, ರುಚಿಕರವಾದ ಚಿಕನ್ ಚಾಪ್ಸ್ ಸವಿಯಲು ಸಿದ್ಧ.