ಚಿಕನ್ ಸುಕ್ಕ ರುಚಿಯ ಜೊತೆಗೆ ಮಾಡಲು ಬಲು ಸುಲಭ. ಇದನ್ನು ತಯಾರಿಸುವ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 1 ಕೆಜಿ ಚಿಕನ್ (ಸಾಧಾರಣ ಗಾತ್ರದಲ್ಲಿ ಚಿಕನ್ ತುಂಡುಗಳಿರಬೇಕು)
* 2 ಚಮಚ ಕೊತ್ತಂಬರಿ ಬೀಜ
* 1/2 ಚಮಚ ಮೆಂತೆ
* ಚಿಟಿಕೆಯಷ್ಟು ಅರಿಶಿಣ ಪುಡಿ
* 1 ಚಮಚೆಯಷ್ಟು ಕರಿಮೆಣಸಿನ ಪುಡಿ
* ಸ್ವಲ್ಪ ಜೀರಿಗೆ
* 1 ಚಮಚ ಗಸೆಗಸೆ
* 2 ಬೆಳ್ಳುಳ್ಳಿ ಎಸಳು
* ಹುರಿದ ಒಣ ಮೆಣಸಿನ ಕಾಯಿ 10-12
* ತುರಿದ ತೆಂಗಿನ ಕಾಯಿ (ಕಾಯಿ ಚಿಕ್ಕದಾಗಿದ್ದರೆ 1 ಇಲ್ಲದಿದ್ದರೆ 1/2 ಭಾಗ)
* ಸ್ವಲ್ಪ ಕರಿ ಬೇವಿನ ಎಲೆ
* ಒಂದು ದೊಡ್ಡ ಕತ್ತರಿಸಿದ ಈರುಳ್ಳಿ
* ತುಪ್ಪ 2 ಚಮಚ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಕರಿಮೆಣಸಿನ ಪುಡಿ, ಅರಿಶಿಣ ಪುಡಿ, ಮೆಂತೆ, ಕೊತ್ತಂಬರಿ ಬೀಜ, ಗಸೆಗಸೆ, ಜೀರಿಗೆ, ಹಾಕಿ ಈ ವಸ್ತುಗಳು ಸ್ವಲ್ಪ ಕರಿಯುವ ವಾಸನೆ ಬರುವವರೆಗೆ ಹುರಿಯಬೇಕು. ನಂತರ ಈ ವಸ್ತುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಬೇಕು.
2. ನಂತರ ಈ ವಸ್ತುಗಳನ್ನು ಹುರಿದ ಒಣ ಕೆಂಪು ಮೆಣಸಿನ ಕಾಯಿ ಮತ್ತು ಅರಿಶಿಣ ಹಾಕಿ ಪುಡಿ ಮಾಡಬೇಕು (ನೀರು ಸೇರಿಸಬಾರದು). ತೆಂಗಿನ ಕಾಯಿಯನ್ನು ನೀರು ಸೇರಿಸದೆ ಅರೆದು ಇಡಬೇಕು (ಪೇಸ್ಟ್ ರೀತಿ ಮಾಡಬೇಡಿ).
3. ನಂತರ ಈ ಪುಡಿಯನ್ನು ಚಿಕನ್ ಜೊತೆ ಮಿಶ್ರ ಮಾಡಿ ರುಚಿಗೆ ತಕ್ಕ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಬೇಕು ( ಪೂರ್ತಿ ಬೇಯಿಸಬೇಡಿ). ಪಾತ್ರೆಯ ಬಾಯಿ ಮುಚ್ಚಬಾರದು.
4. ಈಗ ತೆಂಗಿನ ಕಾಯಿ ಹಾಕಿ, ಪಾತ್ರೆಯ ಬಾಯಿ ಮುಚ್ಚಿ 4-5 ಚಿಕನ್ ಬೇಯಿಸಬೇಕು. ಆಗ ಚಿಕನ್ ಸಂಪೂರ್ಣವಾಗಿ ಬೆಂದಿರುತ್ತದೆ.
5. ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಅದರಲ್ಲಿ ಕರಿಬೇವಿನ ಎಲೆ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ , ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ಅದನ್ನು ತಯಾರಾದ ಚಿಕನ್ ಜೊತೆ ಹಾಕಿ ಮಿಶ್ರ ಮಾಡಿದರೆ ಚಿಕನ್ ಸುಕ್ಕ ರೆಡಿ.