ರುಚಿಕರವಾದ ಚೈನೀಸ್ ಪಕೋಡಾ ಮಾಡುವ ವಿಧಾನ

WhatsApp
Telegram
Facebook
Twitter
LinkedIn

ಬೇಕಾಗುವ ಪದಾರ್ಥಗಳು…

  • ಎಲೆಕೋಸು – ಒಂದೂವರೆ ಬಟ್ಟಲು (ಸಣ್ಣಗೆ ಕತ್ತರಿಸಿದ್ದು)
  • ಕ್ಯಾರೆಟ್ – 1 (ತುರಿದದ್ದು)
  • ಕ್ಯಾಪ್ಸಿಕಂ – ಕಾಲು ಭಾಗ (ಸಣ್ಣಗೆ ಹೆಚ್ಚಿದ್ದು)
  • ಸ್ಪ್ರಿಂಗ್ ಆನಿಯನ್ – 2 ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಈರುಳ್ಳಿ – ಅರ್ಧ (ಸಣ್ಣಗೆ ಹೆಚ್ಚಿದ್ದು)
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ವಿನೆಗರ್ – 1 ಚಮಚ
  • ಸೋಯಾ ಸಾಸ್ – 1 ಚಮಚ
  • ಚಿಲ್ಲಿ ಸಾಸ್ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಮೈದಾ – ಅರ್ಧ ಬಟ್ಟಲು
  • ಕಾರ್ನ್ ಫ್ಲೋರ್ – 2 ಚಮಚ
  • ಫುಡ್ ಕಲರ (ಕೆಂಪು)– ಅರ್ಧ ಚಮಚ
  • ಎಣ್ಣೆ – ಹುರಿಯಲು

ಮಾಡುವ ವಿಧಾನ…

  • ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಸ್ಪ್ರಿಂಗ್ ಆನಿಯನ್, ಮತ್ತು ಈರುಳ್ಳಿ ಹಾಕಿಕೊಳ್ಳಿ.
  • ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
  • ಬಳಿಕ ಮೈದಾ, ಕಾರ್ನ್ ಫ್ಲೋರ್, ಕೆಂಪು ಆಹಾರ ಬಣ್ಣವನ್ನು ಸೇರಿಸಿ.
  • ಮಿಶ್ರಣ ಹಿಟ್ಟಿನಂತಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.
  • ಈಗ ಕೈಗೆ ಎಣ್ಣೆ ಸವರಿ, ಒಂದೊಂದು ಚಮಚ ಮಿಶ್ರಣವನ್ನು ತೆಗೆದುಕೊಂಡು, ಪಕೋಡಾ ರೀತಿಯಲ್ಲಿ ಉಂಡೆ ಮಾಡಿಕೊಳ್ಳಿ.
  • ನಂತರ ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಪಕೋಡಾಗಳನ್ನು ಡೀಪ್ ಫ್ರೈ ಮಾಡಿ. ಪಕೋಡಾ ಗರಿಗರಿಯಾಗುವವರೆಗೆ ಹುರಿದುಕೊಂಡರೆ ರುಚಿಕರವಾದ ಚೈನೀಸ್ ಪಕೋಡಾ ಸವಿಯಲು ಸಿದ್ಧ.
BC Suddi   About Us
For Feedback - [email protected]

Related News

LATEST Post

WhatsApp Icon Telegram Icon