ರುಚಿಕರವಾದ ತಿಳಿಸಾರು ಮಾಡುವ ವಿಧಾನ

WhatsApp
Telegram
Facebook
Twitter
LinkedIn

ಬೇಕಾಗುವ ಪದಾರ್ಥಗಳು…

  • ತೊಗರಿಬೇಳೆ- ಅರ್ಧ ಬಟ್ಟಲು
  • ಅರಿಶಿಣದ ಪುಡಿ- ಸ್ವಲ್ಪ
  • ಎಣ್ಣೆ- ಸ್ವಲ್ಪ
  • ಸಾಸಿವೆ- ಸ್ವಲ್ಪ
  • ಇಂಗು- ಚಿಟಿಕೆಯಷ್ಟು
  • ಬೆಳ್ಳುಳ್ಳು- ಸ್ವಲ್ಪ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
  • ಕರಿಬೇವು- ಸ್ವಲ್ಪ
  • ಹಸಿ ಮೆಣಸಿನ ಕಾಯಿ- 5-6
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 2-3
  • ಉಪ್ಪು- ರುಚಿಗೆ ತಕ್ಕಷ್ಟು
  • ಹುಣಸೆ ರಸ- ಸ್ವಲ್ಪ
  • ಜೀರಿಗೆ ಪುಡಿ- 1 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ…

  • ಮೊದಲಿಗೆ ಕುಕ್ಕರ್’ಗೆ ಚೆನ್ನಾಗಿ ತೊಳೆದ ತೊಗರಿಬೇಳೆ, ಅರಿಶಿಣದ ಪುಡಿ ಹಾಗೂ 1 ಚಮಚ ಎಣ್ಣೆ ಹಾಗೂ ನೀರು ಹಾಕಿ ಮುಚ್ಚಳ ಮುಚ್ಚಿ 3-4 ಕೂಗು ಕೂಗಿಸಿಕೊಳ್ಳಿ.
  • ನಂತರ ಬೆಂದ ಬೇಳೆಯಿಂದ ನೀರು ಬಸಿದು ಬೇಳೆಯನ್ನು ನುಣ್ಣಗೆ ಮಾಡಿಕೊಳ್ಳಿ. ನಂತರ ಬಸಿದ ನೀರನ್ನು ಇದಕ್ಕೆ ಹಾಕಿಟ್ಟುಕೊಳ್ಳಿ.
  • ಮತ್ತೊಂದೆಡೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಇಂಗು, ಜಜ್ಜಿಗೊಂಡ ಬೆಳ್ಳುಳ್ಳು, ಸ್ವಲ್ಪ ಈರುಳ್ಳಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ನಂತರ ಹಸಿ ಮೆಣಸಿನ ಕಾಯಿ, ಟೊಮೆಟೋ, ಉಪ್ಪು ಹಾಕಿ ಚೆನ್ನಾಗಿ ಬೇಸಿಯಿಕೊಳ್ಳಿ. ಬಳಿಕ ಹುಣಸೆ ರಸ, ಜೀರಿಗೆ ಪುಡಿ ಹಾಕಿ 2 ನಿಮಿಷ ಬಿಡಿ, ಈಗಾಗಲೇ ಸ್ಮ್ಯಾಷ್ ಮಾಡಿಟ್ಟುಕೊಂಡ ಬೇಳೆ ಹಾಗೂ ರಸವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿ, ಅಗತ್ಯವಿದ್ದಷ್ಟು ನೀರು ಹಾಕಿ 8-10 ನಿಮಿಷ ಕುದಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ತಿಳಿಸಾರು ಸವಿಯಲು ಸಿದ್ಧ.
BC Suddi   About Us
For Feedback - [email protected]

Related News

LATEST Post

WhatsApp Icon Telegram Icon