ಬೇಕಾಗುವ ಪದಾರ್ಥಗಳು…
- ನುಗ್ಗೆಕಾಯಿ- 4
- ಕೊಬ್ಬರಿ- ಸ್ವಲ್ಪ
- ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು
- ಬಿಳಿ ಎಳ್ಳು- 1 ಚಮಚ
- ಸಾಸಿವೆ- ಸ್ವಲ್ಪ
- ಜೀರಿಗೆ-ಸ್ವಲ್ಪ
- ಕರಿಬೇವು-ಸ್ವಲ್ಪ
- ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು)
- ಈರುಳ್ಳಿ- 2 (ಉದ್ದುದ್ದಕ್ಕೆ ಹೆಚ್ಚಿದ್ದು)
- ಅರಿಶಿಣದ ಪುಡಿ- ಅರ್ಧ ಚಮಚ
- ಖಾರದಪುಡಿ- ಅರ್ಧ ಚಮಚ
- ದನಿಯಾ ಪುಡಿ- ಕಾಲು ಚಮಚ
- ಟೊಮೆಟೋ- 1
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ -ಸ್ವಲ್ಪ
ಮಾಡುವ ವಿಧಾನ…
- ಒಲೆಯ ಮೇಲೆ ಪ್ಯಾನ್ ಇಟ್ಟು ಕಾದ ನಂತರ ಅದಕ್ಕೆ ಕೊಬ್ಬರಿ, ಕಡಲೆಕಾಯಿ ಬೀಜ ಹಾಗೂ ಎಳ್ಳು ಹಾಕಿ ಕೆಂಪಗೆ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ರೀತಿ ರುಬ್ಬಿಟ್ಟುಕೊಳ್ಳಿ.
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ಕೆಂಪಗಾದ ಬಳಿಕ ಹಸಿಮೆಣಸಿನ ಕಾಯಿ ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಅರಿಶಿಣದ ಪುಡಿ, ಖಾರದಪುಡಿ. ದನಿಯಾ ಪುಡಿ. ಟೊಮೆಟೋ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ 5 ನಿಮಿಷ ಸಣ್ಣ ಉರಿಯಲ್ಲಿ ಟೊಮೆಟೋ ಮೆತ್ತಗಾಗಲು ಬಿಡಿ. ನಂತರ ರುಬ್ಬಿಟ್ಟುಕೊಂಡ ಮಿಶ್ರಣ ಹಾಗೂ ಅಗತ್ಯವಿದ್ದಷ್ಟು ನೀರು ಹಾಕಿ. ಕುದಿಯಲು ಬಿಡಿ. ಮಸಾಲೆ ಪದಾರ್ಥ ಕುದಿಯಲು ಆರಂಭಿಸಿದ ಬಳಿಕ ಕತ್ತರಿಸಿಕೊಂಡ ನುಗ್ಗೆಕಾಯಿಗಳನ್ನು ಹಾಕಿ. ನುಗ್ಗೆಕಾಯಿ ಬೇಯುವವರೆಗೆ ಹಿಡಿ. ಇದೀಗ ನುಗ್ಗೆಕಾಯಿ ಕರ್ರಿ ಸವಿಯಲು ಸಿದ್ಧ .