ಬೇಕಾಗುವ ಪದಾರ್ಥಗಳು
- ಪಾಲಾಕ್ ಸೊಪ್ಪು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಹಸಿಮೆಣಸಿನ ಕಾಯಿ- 4-5
- ಪನ್ನೀರ್- ಮಧ್ಯಮ ಗಾತ್ರಕ್ಕೆ ಕತ್ತರಿಸಿದ್ದು ಸ್ವಲ್ಪ
- ಎಣ್ಣೆ, ತುಪ್ಪ- ಸ್ವಲ್ಪ
- ಪಲಾವ್ ಎಲೆ ಮತ್ತು ಇತರೆ ಪಲಾವ್ ವಸ್ತುಗಳು- ಸ್ವಲ್ಪ
- ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಅರಿಶಿಣ- ಸ್ವಲ್ಪ
- ಟೊಮೆಟೋ-2 (ಸಣ್ಣಗೆ ಹೆಚ್ಚಿದ್ದು)
- ಉಪ್ಪು-ರುಚಿಗೆ ತಕ್ಕಷ್ಟು
- ಕ್ಯಾರೆಟ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
- ಬಟಾಣಿ-ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
- ಬೀನ್ಸ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
- ಅಕ್ಕಿ – ಬಟ್ಟಲು
ಮಾಡುವ ವಿಧಾನ…
- ಮೊದಲಿಗೆ ಮಿಕ್ಸಿ ಜಾರ್’ಗೆ ಪಾಲಾಕ್ ಸೊಪ್ಪು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಗೂ 1 ಚಮಚ ತುಪ್ಪ ಹಾಕಿ. ಕಾದ ನಂತರ ಪಲಾವ್ ಎಲೆ ಹಾಗೂ ಪಲಾವ್ ಸಾಮಾಗ್ರಿಗಳನ್ನು ಹಾಕಿ ನಂತರ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಟೊಮೆಟೋ, ಉಪ್ಪು, ಕ್ಯಾರೆಟ್, ಬಟಾಣಿ, ಬೀನ್ಸ್ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ತೊಳೆದು ನೆನೆಸಿಟ್ಟ ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ 1-2 ಕೂಗು ಕೂಗಿಸಿಕೊಳ್ಳಿ. ಬಳಿಕ ಎಣ್ಣೆಯಲ್ಲಿ ಪನ್ನೀರ್ ನ್ನು ಕೆಂಪಗೆ ಹುರಿದುಕೊಳ್ಳಿ. ನಂತರ ಪಲಾವ್ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಲಾಕ್ ಪನ್ನೀರ್ ಪಲಾವ್ ಸವಿಯಲು ಸಿದ್ಧ.