ಬೇಕಾಗುವ ಪದಾರ್ಥಗಳು
- ಪಾಸ್ತಾ- ಬಟ್ಟಲು
- ಬೆಣ್ಣೆ- ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ- 1 ಚಮಚ
- ಟೊಮ್ಯಾಟೋ- 1
- ಈರುಳ್ಳಿ-2
- ಖಾರದ ಪುಡಿ- 1 ಚಮಚ
- ಗರಂ ಮಸಾಲಾಪುಡಿ- 1 ಚಮಚ
- ಜೀರಿಗೆ ಪುಡಿ- ಸ್ವಲ್ಪ
- ಕಸೂರಿ ಮೇಥಿ- ಸ್ವಲ್ಪ
- ಹಾಲು- 2 ಬಟ್ಟಲುು
- ಎಣ್ಣೆ- 2 ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಒಂದು ಪ್ಯಾನ್ ಗೆ ಸ್ವಲ್ಪ ಉಪ್ಪು, 4-5 ಹನಿ ಎಣ್ಣೆ, ಪಾಸ್ತಾ ಮತ್ತು ನೀರನ್ನು ಹಾಕಿ ಬೇಯಿಸಿ. ಪಾಸ್ತಾ ಬೆಂದ ನಂತರ ಅದರಲ್ಲಿರುವ ನೀರನ್ನು ಬಸಿದು ಪಕ್ಕಕ್ಕಿಡಿ.
- ಇನ್ನೊಂದು ಪ್ಯಾನ್ ನಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ನಂತರ ಈರುಳ್ಳಿ, ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಅದು ತಣ್ಣಗಾದ ನಂತ್ರ ಮಿಶ್ರಣವನ್ನು ರುಬ್ಬಿಕೊಳ್ಳಿ.
- ಅದೇ ಪ್ಯಾನ್ ಗೆ ಸ್ವಲ್ಪ ಬೆಣ್ಣೆ ಹಾಕಿ. ನಂತರ ರುಬ್ಬಿದ ಮಿಶ್ರಣ ಹಾಗೂ ಉಪ್ಪನ್ನು ಹಾಕಿ ಬೇಯಿಸಿ. ಬಳಿಕ ಖಾರದ ಪುಡಿ ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಫ್ರೈ ಮಾಡಿ.
- ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ಹಾಲಿನ ಜೊತೆ ಮಸಾಲೆ ಸರಿಯಾಗಿ ಬೆಂದ ನಂತರ ಅದಕ್ಕೆ ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಪಾಸ್ತಾ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಸ್ತಾ ಬಟರ್ ಮಾಸಾಲ ಸವಿಯಲು ಸಿದ್ಧ.