ಬೇಕಾಗುವ ಪದಾರ್ಥಗಳು…
- ಪುದೀನಾ- 1/2 ಕಟ್ಟು
- ಕೊತ್ತಂಬರಿ ಸೊಪ್ಪು-1/4 ಕಟ್ಟು
- ಕಾಳುಮೆಣಸಿನ ಪುಡಿ-1/4 ಚಮಚ
- ಬೆಣ್ಣೆ-1 ಚಮಚ
- ಫ್ರೆಶ್ ಕ್ರೀಂ-1 ಚಮಚ
- ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ.
- ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಮೇಲೆ ಫ್ರೆಶ್ ಕ್ರೀಮ್ ನಿಂದ ಅಲಂಕರಿಸಿದರೆ ರುಚಿಯಾದ ಪುದೀನಾ ಸೂಪ್ ಸಿದ್ಧ.