ಬೇಕಾಗುವ ಪದಾರ್ಥಗಳು…
- ಮೀನು ಮಾಂಸ – 250 ಗ್ರಾಂ (ಸಣ್ಣ ಮೂಳೆಗಳಿಲ್ಲದಿರುವುದು)
- ಅಚ್ಚ ಖಾರದಪುಡಿ – 1 ಚಮಚ
- ದನಿಯಾ ಪುಡಿ – 1 ಚಮಚ
- ಅರಿಶಿನ ಪುಡಿ – ಅರ್ಧ ಚಮಚ
- ಜೀರಿಗೆ ಪುಡಿ – ಅರ್ಧ ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಕಾರ್ನ್ ಫ್ಲೋರ್ – 1 ಚಮಚ
- ಕಡಲೆ ಹಿಟ್ಟು – 2 ಚಮಚ
- ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – ಸ್ವಲ್ಪ
- ಉಪ್ಪು– ರುಚಿಗೆ ತಕ್ಕಷ್ಟು
- ಎಣ್ಣೆ – ಡೀಪ್‌ಫ್ರೈ ಮಾಡಲು ಬೇಕಾಗುವಷ್ಟು
ಮಾಡುವ ವಿಧಾನ…
- ಮೊದಲಿಗೆ ಮೀನನ್ನು ಶುಚಿಗೊಳಿಸಿ, ಮೂಳೆಗಳನ್ನು ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
- ಒಂದು ಬೌಲ್‌ನಲ್ಲಿ ಎಣ್ಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ.
- ಅದಕ್ಕೆ ಮೀನಿನ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ, 20 ನಿಮಿಷ ಮ್ಯಾರಿನೇಟ್ ಆಗಲು ಬಿಡಿ.
- ಈಗ ಎಣ್ಣೆ ಬಿಸಿ ಮಾಡಿ, ಮೀನಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಲ್ಲಿ ತೆಗೆದುಕೊಂಡು ಪಕೋಡಾ ರೀತಿಯಲ್ಲಿ ಎಣ್ಣೆಯಲ್ಲಿ ಬಿಡಿ.
- ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿಕೊಳ್ಳಿ.
- ಇದೀಗ ಗರಿಗರಿಯಾದ ಹಾಗೂ ರುಚಿಕರವಾದ ಫಿಶ್ ಪಕೋಡಾ ಸವಿಯಲು ಸಿದ್ಧ.