ಬೇಕಾಗುವ ಪದಾರ್ಥಗಳು…
- ಈರುಳ್ಳಿ – 1 ಸಣ್ಣದು
- ಬೆಳ್ಳುಳ್ಳಿ – 1 ಎಸಳು
- ಖಾರದಪುಡಿ – 1 ಚಮಚ
- ಚಿಕನ್ ಬ್ರಾಥ್ – 1/2 ಬಟ್ಟಲು
- ಜೀರಿಗೆ – 1 ಚಮಚ
- ಟೊಮೆಟೊ ರಸ – ಒಂದೂವರೆ ಬಟ್ಟಲು,
- ಕಾಳು ಮೆಣಸು – ಸ್ವಲ್ಪ
- ಒಂದೆರಡು ಬಗೆಯ ಮೀನಿನ ತುಂಡು – 1/2 ಕಪ್ (ಮುಳ್ಳು ರಹಿತ ಮೀನಿನ ಮಾಂಸ)
- ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಹಾಗೂ ಖಾರದಪುಡಿ ಸೇರಿಸಿ 2 ನಿಮಿಷ ಹುರಿಯಿರಿ.
- ಅದಕ್ಕೆ ಚಿಕನ್ ಬ್ರಾಥ್, ಕಾಳುಮೆಣಸು, ಜೀರಿಗೆ ಸೇರಿಸಿ ಕೈಯಾಡಿಸಿ. ಇದನ್ನು ದೊಡ್ಡ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಉರಿ ಸಣ್ಣ ಮಾಡಿ 20 ನಿಮಿಷ ಕುದಿಸಿ. ಅದಕ್ಕೆ ಟೊಮೆಟೊ ಹಾಗೂ ಮೀನಿನ ತುಂಡುಗಳನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಸಿ. ಪುನಃ ಮುಚ್ಚಳ ಮುಚ್ಚಿ 5 ನಿಮಿಷ ಕುದಿಸಿ. ಇದೀಗ ಫಿಷ್ ಸೂಪ್ ಸವಿಯಲು ಸಿದ್ಧ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ