ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಬೇಕಾಗುವ ಪದಾರ್ಥಗಳು
- ಒಣಗಿದ ಬಟಾಣಿ- 2 ಬಟ್ಟಲು (8 ಗಂಟೆಗಳ ಕಾಲ ನೆನೆಸಿದ್ದು)
- ಉಪ್ಪು- ರುಚಿಗೆ ತಕ್ಕಷ್ಟು
- ತೆಂಗಿನ ಕಾಯಿ ತುರಿ- 1 ಬಟ್ಟಲು
- ಗಸಗಸೆ- 1 ಚಮಚ (15 ನಿಮಿಷ ನೀರಿನಲ್ಲಿ ನೆನೆಸಿದ್ದು)
- ಗೋಡಂಬಿ- ಸ್ವಲ್ಪ (15 ನಿಮಿಷ ನೀರಿನಲ್ಲಿ ನೆನೆಸಿದ್ದು)
- ಎಣ್ಣೆ – ಸ್ವಲ್ಪ
- ಚಕ್ಕೆ, ಲವಂಗ- ಸ್ವಲ್ಪ
- ಕರಿಬೇವು- ಸ್ವಲ್ಪ
- ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಹಸಿ ಮೆಣಸಿನ ಕಾಯಿ- 2
- ಟೊಮೆಟೋ- 3 ಸಣ್ಣಗೆ ಹೆಚ್ಚಿದ್ದು
- ಅರಿಶಿಣದ ಪುಡಿ- ಕಾಲು ಚಮಚ
- ಜೀರಿಗೆ ಪುಡಿ- ಕಾಲು ಚಮಚ
- ಅಚ್ಚ ಖಾರದ ಪುಡಿ- 1 ಚಮಚ
- ದನಿಯಾ ಪುಡಿ- 1/3 ಚಮಚ
- ತೆಂಗಿನಕಾಯಿ ಹಾಲು – 1 ಬಟ್ಟಲು
- ಕೊತ್ತಂಬರಿ ಸೊಪ್ಪ- ಸಣ್ಣಗೆ ಹೆಚ್ಚಿದ್ದು
- ನಿಂಬೆ ರಸ- ಸವಲ್ಪ
- ತುಪ್ಪ- ಸ್ವಲ್ಪ
- ಗರಂ ಮಸಾಲಾ ಪುಡಿ- ಅರ್ಧ ಚಮಚ
- ಕಾಶ್ಮೀರಿ ಚಿಲ್ಲಿ ಪೌಡರ್- ಅರ್ಧ ಚಮಚ
-
ಮಾಡುವ ವಿಧಾನ…
- ಮೊದಲಿಗೆ ನೆನೆಸಿಟ್ಟ ಬಟಾಣಿ, ನೀರು ಹಾಗೂ ಉಪ್ಪನ್ನು ಕುಕ್ಕರ್ ಹಾಕಿ ಬಟಾಣಿ ಮೆತ್ತಗಾಗುವರೆಗೆ ಕೂಗಿಸಿಕೊಂಡು ಪಕ್ಕಕ್ಕಿಡಿ.
- ತೆಂಗಿನ ಕಾಯಿ ತುರಿ, ಗಸಗಸೆ, ಗೋಡಂಬಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೇ ರೀತಿ ಮತ್ತೊಂದು ಬಟ್ಟಲು ತೆಂಗಿನ ಕಾಯಿ ತುರಿ ತೆಗೆದುಕೊಂಡು ಗಟ್ಟಿಯಾಗಿ ರುಬ್ಬಿ ತೆಂಗಿನ ಹಾಲು ತೆಗೆದಿಟ್ಟುಕೊಳ್ಳಿ.
- ಒಲೆಯ ಮೇಲೆ ಬಾಣಲೆಯಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಕರಿಬೇವು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ಬಳಿಕ ಹಸಿ ಮೆಣಸಿನ ಕಾಯಿ, ಟೊಮೆಟೋ ಹಾಕಿ ಕೆಂಪಗೆ ಹುರಿದು, ಅರಿಶಿಣದ ಪುಡಿ, ಜೀರಿಗೆ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ ಹಾಕಿ 5 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ ನಂತರ ಬೇಯಿಸಿಕೊಂಡ ಬಟಾಣೆಯನ್ನು ಇದಕ್ಕೆ ಸೇರಿಸಿ 5 ನಿಮಿಷ ಕುದಿಯಲು ಬಿಡಿ. ಬಳಿಕ ತೆಂಗಿನ ಕಾಯಿ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಸೇರಿಸಿ 10 ನಿಮಿಷ ಸಣ್ಣ ಉರಿಯಲಿ ಕುದಿಸಿ.
- ಪ್ಯಾನ್ ವೊಂದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಬಳಿಕ ಅದಕ್ಕೆ ಗರಂ ಮಸಾಲಾ ಪುಡಿ ಹಾಗೂ ಕಾಶ್ಮೀರಿ ಚಿಲ್ಲಿ ಪೌಡರ್ ಹಾಕಿ ಕೆಂಪಗೆ ಮಾಡಿಕೊಂಡು ಮಸಾಲೆಗೆ ಹಾಕಿ ಬೆರೆಸಿದರೆ ರುಚಿಕರವಾದ ಬಟಾಣಿ ಕುರ್ಮಾ ಚಪಾತಿಯೊಂದಿಗೆ ಸವಿಯಲು ಸಿದ್ಧ.