ಬೇಕಾಗುವ ಪದಾರ್ಥಗಳು…
- ಬಾಳೆಕಾಯಿ- 3
- ಹಸಿ ಮೆಣಸಿನಕಾಯಿ – 2
- ಶುಂಠಿ- ಸ್ವಲ್ಪ
- ಬೇಯಿಸಿದ ಬಟಾಣಿ – 1/4 ಬಟ್ಟಲು
- ಹಿಂಗು – 1 ಚಿಟಿಕಿ
- ಅಚ್ಚಖಾರದ ಪುಡಿ– ¼ ಚಮಚ
- ಗರಂ ಮಸಾಲ ಪುಡಿ – 1/2 ಚಮಚ
- ಆಮ್ಚೂರ್ ಪುಡಿ – 1/4 ಚಮಚ
- ಉಪ್ಪು – ರುಚಿಗೆ ತಕ್ಕಂತೆ
- ಎಣ್ಣೆ – ಸ್ವಲ್ಪ
- ಶಾವಿಗೆ – ಸ್ವಲ್ಪ
- ಮೊದಲು ಬಾಳೆಕಾಯಿ ಬೇಯಿಸಿ, ಸಿಪ್ಪೆ ತೆಗೆಯಿರಿ. ಒಂದು ಬಟ್ಟಲಿಗೆ ಹಾಕಿ ನುಣ್ಣಗೆ ಮಾಡಿಕೊಳ್ಳಿ. ಮತ್ತೊಂದೆಡೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬಟಾಣಿಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಈ ಮಿಶ್ರಣವನ್ನು ಬೇಯಿಸಿದ ಬಾಳೆಕಾಯಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
- ಇದಕ್ಕೆ ಹಿಂಗು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಆಮ್ಚೂರ್ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಸ್ವಲ್ಪ ಪುಡಿ ಮಾಡಿದ ಶಾವಿಗೆಯಲ್ಲಿ ಅದ್ದಿ, ಎಣ್ಣೆಗೆ ಹಾಕಿ ಬಂಗಾರದ ಬಣ್ಣಕ್ಕೆ ಬರುವರೆಗೆ ಕರಿಯಿರಿ. ಇದೀಗ ರುಚಿಕರವಾದ ಬಾಳೆಕಾಯಿ ಟಿಕ್ಕಾ ಸವಿಯಲು ಸಿದ್ಧ.