ಬೇಕಾಗುವ ಪದಾರ್ಥಗಳು…
- ಬೀಟ್ರೂಟ್-ಒಂದು
- ಗೋಧಿ ಹಿಟ್ಟು 2 ಬಟ್ಟಲು
- ತುಪ್ಪ- ಒಂದು ದೊಡ್ಡ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಗರಂ ಮಸಾಲೆ ಪುಡಿ-ಅರ್ಧ ಚಮಚ
- ಅಚ್ಚ ಖಾರದ ಪುಡಿ- ಅರ್ಧ ಚಮಚ
- ಜೀರಿಗೆ ಪುಡಿ-ಅರ್ಧ ಚಮಚ
- ಕಾಳು ಮೆಣಸಿನ ಪುಡಿ- ಅರ್ಧ ಚಮಚ
- ಕೊತ್ತಂಬರಿ ಸೊಪ್ಪು ಅಥವಾ ಮೆಂತ್ಯೆ ಸೊಪ್ಪು- ಒಂದು ಮುಷ್ಟಿಯಷ್ಟು (ಎಲೆಗಳು ಮಾತ್ರ)
ಮಾಡುವ ವಿಧಾನ…
- ಬೀಟ್ರೂಟ್ ಚೆನ್ನಾಗಿ ತೊಳೆದು ಇಡೀ ಬೀಟ್ರೂಟ್ ಅನ್ನು ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ. ತಣ್ಢಗಾದ ಮೇಲೆ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ.
- ಒಂದು ದೊಡ್ಡ ಪಾತ್ರೆಗೆ ಗೋಧಿ ಹಿಟ್ಟು, ತುಪ್ಪ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ತೂರಿದ ಬೀಟ್ರೂಟ್, ಜೀರಿಗೆ ಪುಡಿ ಗರಂ ಮಸಾಲೆ ಪುಡಿ, ಖಾರದ ಪುಡಿ, ಕಾಳುಮೆಣಸಿನ ಪುಡಿ ಹಾಗೂ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ. ಚೆನ್ನಾಗಿ ಮಿಶ್ರ ಮಾಡಿ. ಚೂರು ಚೂರೇ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಚೆನ್ನಾಗಿ ನಾದಿಕೊಳ್ಳಿ.
- ಸಣ್ಣ ಸಣ್ಣ ಉಂಡೆ ಮಾಡಿ, ಒಣ ಹಿಟ್ಟನ್ನು ಹಚ್ಚಿ ಚಪಾತಿ ಲಟ್ಟಿಸಿ. ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ರುಚಿಕರವಾದ ಬೀಟ್ರೂಟ್ ಚಪಾತಿ ಸವಿಯಲು ಸಿದ್ಧ.