ಬೇಕಾಗುವ ಪದಾರ್ಥಗಳು…
- ಮೂಳೆ ಸಹಿತ ಮಟನ್ – 250 ಗ್ರಾಂ
- ಈರುಳ್ಳಿ – 1
- ಟೊಮೆಟೊ – 1
- ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಅರಿಸಿನ ಪುಡಿ – ಕಾಲು ಚಮಚ
- ಖಾರದಪುಡಿ – ಅರ್ಧ ಚಮಚ
- ಕಾಳುಮೆಣಸಿನ ಪುಡಿ – ಅರ್ಧ ಚಮಚ
- ಎಣ್ಣೆ – 1 ಚಮಚ,
- ಚಕ್ಕೆ-ಸ್ವಲ್ಪ
- ಪಲಾವ್ ಎಲೆ – 1,
- ಲವಂಗ – 4
- ಉಪ್ಪು – ರುಚಿಗೆ ತಕ್ಕಷ್ಟು
- ಕರಿಬೇವು – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ…
- ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಕುಕ್ಕರ್‌ನಲ್ಲಿ ಹಾಕಿ. ಅದಕ್ಕೆ ಈರುಳ್ಳಿ, ಟೊಮೆಟೊ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು, ಶುಂಠಿ–ಬೆಳುಳ್ಳಿ ಪೇಸ್ಟ್, ಅರಿಸಿನ ಪುಡಿ, ಖಾರದಪುಡಿ ಹಾಗೂ ಉಪ್ಪು ಹಾಗೂ 5 ಗ್ಲಾಸ್ ನೀರು ಸೇರಿಸಿ. ದೊಡ್ಡ ಉರಿಯಲ್ಲಿ 4 ವಿಶಲ್ ಕೂಗಿಸಿ. ಪ್ರೆಷರ್ ತೆಗೆದು, ಈಗ ಉರಿ ಕಡಿಮೆ ಮಾಡಿ, ಪುನಃ 10 ರಿಂದ 12 ನಿಮಿಷ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣದಾಗ ಮೇಲೆ ಈ ಎಲ್ಲವನ್ನೂ ಸ್ಮ್ಯಾಶ್ ಮಾಡಿ (ನುಣ್ಣಗೆ ಮಾಡಬಾರದು).
- ಪ್ಯಾನ್‌ವೊಂದನ್ನು ಬಿಸಿ ಮಾಡಿ ಅದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ ಹಾಗೂ ಕರಿಬೇವು ಹಾಕಿ ಎಲ್ಲವನ್ನು ಹುರಿಯಿರಿ. ಅದಕ್ಕೆ ಮೊದಲೇ ಬೇಯಿಸಿಟ್ಟುಕೊಂಡ ಸೂಪ್ ಸೇರಿಸಿ. ಕಾಳುಮೆಣಸಿನ ಪುಡಿ ಸೇರಿಸಿ ಸ್ಟೌ ಆಫ್ ಮಾಡಿ. ಬಡಿಸುವ ಮೊದಲು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ಇದೀಗ ರುಚಿಕರವಾದ ಮಟನ್ ಸೂಪ್ ಸವಿಯಲು ಸಿದ್ಧ.