ಬೇಕಾಗುವ ಪದಾರ್ಥಗಳು…
- ಮಶ್ರೂಮ್ – 200 ಗ್ರಾಂ
- ಕಬಾಬ್ ಪೌಡರ್ –ಒಂದು ಪ್ಯಾಕೆಟ್
- ಶುಂಠಿ– ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಖಾರದಪುಡಿ –ಅರ್ಧ ಚಮಚ
- ಚಿಕನ್ ಮಸಾಲ– ಅರ್ಧ ಚಮಚ
- ಮೊಟ್ಟೆ –ಒಂದು
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ – ಸ್ವಲ್ಪ
ಮಾಡುವ ವಿಧಾನ…
- ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದಕ್ಕೆ ಕಬಾಬ್ ಪೌಡರ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಚಿಕನ್ ಮಸಾಲೆ ಪುಡಿ, ಮೊಟ್ಟೆ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಮಸಾಲೆ ಹಿಡಿಯುವವರೆಗೆ ಕೈಯಾಡಿಸಿ. 10ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ.
- ನಂತರ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
- ಅದಕ್ಕೆ ನೆನೆಸಿಟ್ಟಿದ್ದ ಮಶ್ರೂಮ್ ಹಾಕಿ. ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿ. ಇದೀಗ ಬಿಸಿ ಬಿಸಿಯಾದ ಮಶ್ರೂಮ್ ಕಬಾಬ್ ಸವಿಯಲು ಸಿದ್ಧ.