ಬೇಕಾಗುವ ಪದಾರ್ಥಗಳು
- ಎಣ್ಣೆ- 3-4 ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
- ಕರಿಬೇವು-ಸ್ವಲ್ಪ
- ಹಸಿಮೆಣಸಿನ ಕಾಯಿ-3-4
- ಅಣಬೆ- 400 ಗ್ರಾಂ
- ಉಪ್ಪು-ರುಚಿಗೆತಕ್ಕಷ್ಟು
- ಅರಿಶಿನದ ಪುಡಿ- ಸ್ವಲ್ಪ
- ಕಾಳುಮೆಣಸಿನ ಪುಡಿ- 3-4 ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ನಿಂಬೆಹಣ್ಣಿನ ರಸ- ಅರ್ಧ ಚಮಚ
ಮಾಡುವ ವಿಧಾನ…
- ಮೊದಲಿಗೆ ಅಣಬೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
- ನಂತರ ಕರಿಬೇವು, ಈರುಳ್ಳಿ ಹಸಿಮೆಣಸಿನ ಕಾಯಿ ಹಾಗಿ ಕೆಂಪಗೆ ಹುರಿದುಕೊಳ್ಳಿ. ನಂತರ ಅಣಬೆ ಹಾಗೂ ಉಪ್ಪು, ಅರಿಶಿನದ ಪುಡಿ ಹಾಕಿ 3 ನಿಮಿಷ ಬೇಯಿಸಿಕೊಳ್ಳಿ. ನಂತರ ಅಣಬೆಯಲ್ಲಿ ನೀರು ಬಿಟ್ಟುಕೊಳ್ಳುತ್ತದೆ.
- ಬಳಿಕ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಮತ್ತೆ 3 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆಹಣ್ಣಿನ ರಸ ಹಾಕಿ ಮಿಶ್ರಣ ಮಾಡಿದರೆ ಅಣಬೆ ಪೆಪ್ಪರ್ ಫ್ರೈ ಸವಿಯಲು ಸಿದ್ಧ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ