ಬೇಕಾಗುವ ಪದಾರ್ಥಗಳು…
- ಮಾವಿನಹಣ್ಣಿನ ತಿಳಿ ರಸ- ಅರ್ಧ ಬಟ್ಟಲು
- ಸಕ್ಕರೆ – ಒಂದು ಬಟ್ಟಲು
- ಕಾರ್ನ್ ಫ್ಲೋರ್- 1 ಚಮಚ
- ತುಪ್ಪ- ಒಂದು ಚಮಚ
ಮಾಡುವ ವಿಧಾನ…
- ಅರ್ಧ ಕಪ್ ನೀರಿನಲ್ಲಿ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಾವಿನ ಹಣ್ಣಿನ ರಸಕ್ಕೆ ಬೆರೆಸಿಕೊಳ್ಳಿ.
- ಬಾಣಲೆಯಲ್ಲಿ ಸಕ್ಕರೆಗೆ ಒಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿಡಿ. ಸಕ್ಕರೆ ಸಂಪೂರ್ಣ ಕರಗಿ ನೊರೆಯಾಡುವಾಗ ಮಾವಿನರಸದ ಮಿಶ್ರಣ, ತುಪ್ಪ ಸೇರಿಸಿ ಕೈಯಾಡಿಸುತ್ತಿರಿ.
- ಮಿಶ್ರಣ ತಳ ಬಿಡುವಾಗ ತುಪ್ಪ ಸವರಿದ ತಟ್ಟೆಯಲ್ಲಿ ಸುರಿಯಿರಿ. ತಣ್ಣಗಾದ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಮ್ಯಾಂಗೊ ಜೆಲ್ಲಿ ಸವಿಯಲು ಸಿದ್ದ.