ಬೇಕಾಗುವ ಪದಾರ್ಥಗಳು…
- ಹೆಚ್ಚಿದ ಮೆಂತ್ಯೆ ಸೊಪ್ಪು- 1 ಬಟ್ಟಲು
- ಈರುಳ್ಳಿ- 1 ದೊಡ್ಡದು 1 (ಉದ್ದನೆ ಹೆಚ್ಚಿದ್ದು)
- ಶುಂಠಿ, ಬೆಳುಳ್ಳಿ ಪೇಸ್ಟ್ – 1 ಚಮಚ,
- ಟೊಮ್ಯಾಟೋ- 2
- ಬೆಚ್ಚನೆ ಹುರಿದು ಪುಡಿ ಮಾಡಿದ ದನಿಯಾ- 1 ಚಮಚ
- ಖಾರದ ಪುಡಿ- 1 ಚಮಚ
- ಜೀರಿಗೆ ಪುಡಿ-ಒಂದೂವರೆ ಚಮಚ
- ಬಟಾಣಿ 1 ಬಟ್ಟಲು
- ಅಕ್ಕಿ 1 ಪಾವು
- ನೀರು-2 1/2 ಲೋಟ
ಮಾಡುವ ವಿಧಾನ…
- ಮೊದಲು ಕುಕ್ಕರಿನಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿದು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಸಮಯದ ನಂತರ ಮೆಂತ್ಯೆ ಸೊಪ್ಪು, ಬಟಾಣಿ ಹಾಕಿ 3 ನಿಮಿಷ ಬಾಡಿಸಿ ಟೊಮ್ಯಾಟೋ ಸೇರಿಸಿ.
- ಜೀರಿಗೆ, ದನಿಯಾ ಪುಡಿ, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು, ಅಕ್ಕಿಯನ್ನು ಹಾಕಿ, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕ್ಕರ್ 2 ವಿಷಲ್ ಹಾಕಿದಾಗ ತೆಗೆಯಿರಿ. ಬಿಸಿ ಬಿಸಿ ಮೆಂತ್ಯೆ ರೈಸ್ ಸವಿಯಲು ಸಿದ್ಧ.