ಬೇಕಾಗುವ ಪದಾರ್ಥಗಳು…
- ಮ್ಯಾಕ್ರೋನಿ – 1 ಬಟ್ಟಲು ( ಬೇಯಿಸಿದ್ದು)
- ಮಯೋನಿಸ್- 1/4 ಬಟ್ಟಲು
- ವೈಟ್ ವಿನೇಗರ್- 1 ಚಮಚ
- ಸಕ್ಕರೆ – 1 ಚಮಚ
- ಸಾಸಿವೆ-1 ಚಮಚ
- ಕಾಳು ಮೆಣಸಿನ ಪುಡಿ- 1/2 ಚ್ಚ
- ಖಾರದ ಪುಡಿ- 1/2 ಚಮಚ
- ಈರುಳ್ಳಿ- 1/4 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
- ಗ್ರೀನ್ ಕ್ಯಾಪ್ಸಿಕಂ- 1/4 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
- ರೆಡ್ ಕ್ಯಾಪ್ಸಿಕಂ- 1/4 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
- ಕ್ಯಾರೆಟ್-1/4 ಬಟ್ಟಲು (ತುರಿದದ್ದು)
- ಈರುಳ್ಳಿ ಸೊಪ್ಪು-1/2 ಬಚ್ಚಲು (ಸಣ್ಣಗೆ ಹೆಚ್ಚಿದ್ದು)
- ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಇಡಿ. ನಂತರ ಇದಕ್ಕೆ ಮ್ಯಾಕ್ರೋನಿ ಹಾಕಿ ಇದು 5 ನಿಮಿಷಗಳ ಕಾಲ ಬೇಯಿಸಿಕೊಂಡು ನೀರು ಬಸಿದುಕೊಳ್ಳಿ.
- ಇನ್ನೊಂದು ಬೌಲ್ ತೆಗೆದುಕೊಂಡು ಮಯೋನಿಸ್, ಸಾಸಿವೆ, ವಿನೇಗರ್, ಖಾರದ ಪುಡಿ, ಸಕ್ಕರೆ, ಉಪ್ಪು, ಕಾಳುಮೆಣಸು, ಈರುಳ್ಳಿ, ರೆಡ್ ಬೆಲ್ ಪೆಪ್ಪರ್, ಗ್ರೀನ್ ಬೆಲ್ ಪೆಪ್ಪರ್, ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದಕ್ಕೆ ಮ್ಯಾಕ್ರೋನಿ ಸೇರಿಸಿ ಮಿಕ್ಸ್ ಮಾಡಿಕೊಂಡು ಫ್ರಿಡ್ಜ್ ನಲ್ಲಿ 4 ಗಂಟೆಗಳ ಕಾಲ ಇಟ್ಟು ತೆಗೆದರೆ ಮ್ಯಾಕ್ರೋನಿ ಸಲಾಡ್ ಸವಿಯಲು ಸಿದ್ಧ.