ಬೇಕಾಗುವ ಪದಾರ್ಥಗಳು…
- ಹಸಿಮೆಣಸಿನ ಕಾಯಿ- 3-4
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ-ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಅಕ್ಕಿ- ಒಂದು ಬಟ್ಟಲು
- ಎಣ್ಣೆ, ತುಪ್ಪ- ಸ್ವಲ್ಪ
- ಜೀರಿಗೆ- 1 ಚಮಚ
- ಚಕ್ಕೆ, ಲವಂಗ-ಸ್ವಲ್ಪ
- ಏಲಕ್ಕಿ-3
- ಪಲಾವ್ ಎಲೆ- 2-3
- ದನಿಯಾ ಪುಡಿ- 1 ಚಮಚ
- ಜೀರಿಗೆ ಪುಡಿ- ಕಾಲು ಚಮಚ
- ಗರಂ ಮಸಾಲಾ ಪುಡಿ- ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಹಾಲು- ಒಂದು ಬಟ್ಟಲು
- ಗೋಡಂಬಿ- ಒಂದು ಹಿಡಿಯಷ್ಟು
- ಕ್ಯಾರೆಟ್- ಒಂದು ಸಣ್ಣ ಬಟ್ಟಲು
- ಬೀನ್ಸ್- ಒಂದು ಸಣ್ಣ ಬಟ್ಟಲು
- ಬಟಾಣಿ- ಒಂದು ಸಣ್ಣ ಬಟ್ಟಲು
-
ಮಾಡುವ ವಿಧಾನ…
- ಮೊದಲಿಗೆ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಿಸಿನ ಕಾಯಿಯನ್ನು ಚೆನ್ನಾಗಿ ರುಬ್ಬಿಟ್ಟುಕೊಳ್ಳಿ
- ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಎಣ್ಣೆ, ತುಪ್ಪವನ್ನು ಸ್ವಲ್ಪ ಹಾಕಿ. ಕಾದ ನಂತರ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಚೆನ್ನಾಗಿ ಕೆಂಪಗೆ ಹುರಿಯಿರಿ. ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಅರ್ಧ ಹಾಕಿ ಮಿಶ್ರಣ ಮಾಡಿ. ನಂತರ ದನಿಯಾ ಪುಡಿ, ಜೀರಿಗೆ ಪುಡಿ ಹಾಗೂ ಗರಂ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಗೂ ಉಪ್ಪು ಹಾಕಿ, ಹಾಲು ಒಂದು ಬಟ್ಟಲು ಹಾಗೂ ಒಂದು ಬಟ್ಟಲು ನೀರು ಹಾಕಿ ಒಂದು ಕೂಗಿಸಿಕೊಳ್ಳಿ.
- ಮತ್ತೊಂದು ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಚಮಚ ತುಪ್ಪವನ್ನು ಹಾಕಿ ಗೋಡಂಬಿಯನ್ನು ಹುರಿದು ಪಕ್ಕಕ್ಕಿಡಿ. ಇದೇ ಬಾಣಲೆಗೆ ಕ್ಯಾರೆಡ್, ಬೀನ್ಸ್ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಬೇಯಿಸಿದ ಬಟಾಣೆಯನ್ನು ಹಾಗೂ ಕಾಲು ಲೋಟದಷ್ಟು ನೀರು ಹಾಕಿ 3-5 ನಿಮಿಷ ಬೇಯಲು ಬಿಡಿ. ನಂತರ ಎತ್ತಿಟ್ಟಿದ್ದ ಅರ್ಧದಷ್ಟು ರುಬ್ಬಿದ ಮಿಶ್ರಣವನ್ನು ಹಾಗೂ ಉಪ್ಪು ಹಾಕಿ ಮತ್ತೆ 2-3 ನಿಮಿಷ ಬೇಯಿಸಿಕೊಳ್ಳಿ. ಬೆಂದ ನಂತರ ಗೋಡಂಬಿಯನ್ನು ಇದರೊಂದಿಗೆ ಸೇರಿಸಿ ನಿಧಾನಗತಿಯಲ್ಲಿ ಬೆಂದ ಅನ್ನಕ್ಕೆ ಮಿಶ್ರಣ ಮಾಡಿದರೆ ರುಚಿಕರವಾದ ವೆಜ್ ಬಿರಿಯಾನಿ ಸವಿಯಲು ಸಿದ್ಧ.
” ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.”