ಸೋರೆಕಾಯಿಯಿಂದ ಪಾಯಸ ಕೂಡಾ ಮಾಡಬಹುದು. ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು ಒಂದು ಚಿಕ್ಕ ಸೋರೆಕಾಯಿ. ಸಕ್ಕರೆ ಅಥವಾ ಬೆಲ್ಲ ಸಿಹಿಗೆ ತಕ್ಕಷ್ಟು. ತೆಂಗಿನಕಾಯಿ ತುರಿ. ಏಲಕ್ಕಿ-2 ರಿಂದ 3. ಹಾಲು -1 ಕಪ್.
ಮಾಡುವ ವಿಧಾನ : ಸೋರೆಕಾಯಿಯನ್ನು ಸಿಪ್ಪೆ ತೆಗೆದು ಅದನ್ನ ಹೆಚ್ಚಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ, ಬೆಂದ ಮೇಲೆ ಅದನ್ನ ತಣ್ಣಗಾಗುವವರೆಗೂ ಬಿಡಿ. ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ಇನ್ನೊಂದು ಕಡೆ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿ. ಪಾತ್ರೆಯಲ್ಲಿ ರುಬ್ಬಿದ ಸೋರೆಕಾಯಿ, ತೆಂಗಿನ ತುರಿ, ಹಾಲು ಹಾಕಿ ಕುದಿಸಿ. ಒಂದು ಕುದಿಯ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಕಿ ಮತ್ತೊಮ್ಮೆ ಕುದಿಸಿ, ಏಲಕ್ಕಿ ಪುಡಿ ಸೇರಿಸಿ. ಬಿಸಿ ಬಿಸಿಯಾದ ಸೋರೆಕಾಯಿ ಪಾಯಸ ಸವಿದು ನೋಡಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ