ಬೇಕಾಗುವ ಪದಾರ್ಥಗಳು
- ಸಕ್ಕರೆ- 1 ಬಟ್ಟಲು
- ಕಸ್ಟರ್ಡ್ ಪೌಡರ್- ಅರ್ಧ ಬಟ್ಟಲು
- ಹಾಲಿನ ಪೌಡರ್- ಮುಕ್ಕಾಲು ಬಟ್ಟಲು
- ಹಾಲು- ಅರ್ಧ ಲೀಟರ್
- ಬಾದಾಮಿ – 2 ಹಿಡಿಯಷ್ಟು
- ಗೋಡಂಬಿ- 1 ಹಿಡಿಯಷ್ಟು
- ವಾಲ್ನಟ್-ಸ್ವಲ್ಪ
- ಪಿಸ್ತಾ-ಸ್ವಲ್ಪ
- ಏಲಕ್ಕಿ- ಸ್ವಲ್ಪ
- ಕೇಸರಿ ದಳ- ಸ್ವಲ್ಪ
- ಮಾಡುವ ವಿಧಾನ…ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಕ್ಕರೆ, ಕಸ್ಟರ್ಡ್ ಪೌಡರ್, ಮಿಲ್ಕ್ ಪೌಡರ್, ಬಾದಾಮಿ, ಗೋಜಂಬಿ, ವಾಲ್ನಟ್ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಗಾಳಿಯಾಡದ ಡಬ್ಬಿಗೆ ಹಾಕಿ ಎತ್ತಿಟ್ಟುಕೊಂಡು, ಬೇಕೆನಿಸಿದಾಗ ಶರಬತ್ತು ಮಾಡಿಕೊಳ್ಳಬಹುದು.
ಇದೀಗ ಒಲೆಯ ಮೇಲೆ ಪಾತ್ರೆ ಇಟ್ಟು, ಪಾತ್ರೆಗೆ ಹಾಲು ಹಾಕಿ ಗಟ್ಟಿಯಾಗುವವರೆಗೆ ಕಾಯಿಸಿ. ಬಳಿಕ ಅಗತ್ಯವೆನಿಸಿದಷ್ಟು ಪುಡಿಯನ್ನು ಹಾಕಿ. 2 ನಿಮಿಷ ಕುದಿಸಿ. ನಂತರ ಕೇಸರಿ ದಳ ಹಾಗೂ ಪಿಸ್ತಾ ಹಾಗೂ ಬಾದಾಮಿ ಚೂರುಗಳನ್ನು ಹಾಕಿ, ಮಿಶ್ರಣ ಮಾಡಿ. ಬಳಿಕ ಇದು ತಣ್ಣಗಾಗಲು ಫ್ರಿಡ್ಜ್ ನಲ್ಲಿಡಿ. ಇದೀಗ ಸ್ಪೆಷಲ್ ಶರಬತ್ ಸವಿಯಲು ಸಿದ್ಧ. ಇಷ್ಟಪಡುವುದಾದರೆ ಟೂಟಿ ಫ್ರೂಟಿಯನ್ನು ಕೂಡ ಹಾಕಿಕೊಳ್ಳಬಹುದು. ಇದು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.