ಬೇಸಿಗೆ ಶುರುವಾಗ್ತಿದೆ, ತಣ್ಣಗಿನ ವಸ್ತು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆ ತಿನ್ನಲು ಕಾಯಿಲೆ ಭಯ, ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಫಲೂದ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಹಾಲು, 2 ಟೇಬಲ್ ಸ್ಪೂನ್ – ಸಕ್ಕರೆ, 1 ಟೇಬಲ್ ಸ್ಪೂನ್ – ಸಬ್ಜಾ ಬೀಜ(1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ), 2 ಟೇಬಲ್ ಸ್ಪೂನ್ – ರೋಸ್ ಜೆಲ್ಲಿ. 1 ಟೇಬಲ್ ಸ್ಪೂನ್ – ರೋಸ್ ಸಿರಪ್, ¼ ಕಪ್ – ಫಲೂಡ ಸೇವ್, 2 ಟೇಬಲ್ ಸ್ಪೂನ್ – ಐಸ್ ಕ್ರೀಂ.
ರುಚಿಕರ ʼಬೀನ್ಸ್ ರೋಸ್ಟ್ʼ ರೆಸಿಪಿ ಮಾಡುವ ವಿಧಾನ:
ಹಾಲನ್ನು ಕುದಿಸಿಕೊಂಡು ತಣ್ಣಗಾದ ಮೇಲೆ ಫ್ರಿಡ್ಜ್ ನಲ್ಲಿಟ್ಟು ಕೂಲ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಿ ನಂತರ ಸಬ್ಜಾ ಬೀಜವನ್ನು ಸೋಸಿಕೊಳ್ಳಿ. 1 ಕಪ್ ನೀರನ್ನು ಕುದಿಸಿಕೊಂಡು ಅದಕ್ಕೆ ಫಲೂಡ ಸೇವ್ ಅನ್ನು ಹಾಕಿ. ಅದು ಬೆಂದ ಬಳಿಕ ನೀರನ್ನು ಬಸಿದುಕೊಳ್ಳಿ. ನಂತರ 1 ದೊಡ್ಡ ಗ್ಲಾಸ್ ತೆಗೆದುಕೊಂಡು ಅದಕ್ಕೆ ಮೊದಲು ಜೆಲ್ಲಿ ಹಾಕಿ ನಂತರ ಸಬ್ಜಾ ಬೀಜ ಹಾಕಿ ಹಾಗೇ ಫಲೂಡ ಸೇವ್, ರೋಸ್ ಸಿರಪ್ ಸೇರಿಸಿ. ಇದಾದ ಬಳಿಕ ಹಾಲು ಹಾಕಿ ಅದರ ಮೇಲೆ ಐಸ್ ಕ್ರೀಂ ಹಾಕಿದರೆ ಫಲೂಡ ಸವಿಯಲು ರೆಡಿ.