ಬೇಕಾಗುವ ಪದಾರ್ಥಗಳು :
ಮೈದಾ ಹಿಟ್ಟು- 1 ಬಟ್ಟಲು, ಚಿರೋಟಿ ರವೆ- 1 ಚಮಚ, ಹಸಿ ಮೆಣಸಿನಕಾಯಿ- 4 ರಿಂದ 5, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ- 2 ಚಮಚ, ಶುಂಠಿ ಪೇಸ್ಟ್- 1/2 ಚಮಚ, ಚಾಟ್ ಮಸಾಲ- 1 ಚಮಚ, ನಿಂಬೆರಸ ಸ್ವಲ್ಪ, ಡಾಲ್ಡಾ- ಸ್ವಲ್ಪ, ಬೇಬಿ ಕಾರ್ನ್- 1 ಕಪ್.
ಮಾಡುವ ವಿಧಾನ :
ಬೌಲ್ ಗೆ ಮೈದಾ, ಚಿರೋಟಿ ರವೆ, ಡಾಲ್ಡಾ, ಉಪ್ಪು ಹಾಕಿ ಕಲೆಸಿಡಿ. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಶುಂಠಿ ಪೇಸ್ಟ್, ಹೆಚ್ಚಿದ ಹಸಿ ಮೆಣಸಿನಕಾಯಿ, ಚಾಟ್ ಮಸಾಲ, ಬೇಯಿಸಿದ ಕಾರ್ನ್ ಅನ್ನು ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ನಿಂಬೆರಸ ಹಾಕಿ ಪಲ್ಯ ರೆಡಿ ಮಾಡಿಕೊಳ್ಳಿ. ಕಲೆಸಿದ ಮೈದಾಹಿಟ್ಟನ್ನು ಲಟ್ಟಿಸಿ ಸಮೋಸದ ಆಕಾರ ಮಾಡಿ ರೆಡಿಯಾದ ಪಲ್ಯವನ್ನು ಅದರೊಳಗೆ ತುಂಬಿ ಎಣ್ಣೆಯಲ್ಲಿ ಕರೆಯಿರಿ. ಈಗ ರುಚಿ ರುಚಿಯಾದ ಕಾರ್ನ್ ಸಮೋಸಾ ಸವಿಯಲು ಸಿದ್ದ.